ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮದ ಹೆಸರಲ್ಲಿ ಮತಯಾಚನೆ: ಸಂಸದ ಜಾಧವ ವಿರುದ್ಧ ಎಫ್ಐಆರ್

Published 25 ಏಪ್ರಿಲ್ 2024, 14:40 IST
Last Updated 25 ಏಪ್ರಿಲ್ 2024, 14:40 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರಗಿ ಜಿಲ್ಲೆ): ಮಾದರಿ ನೀತಿ ಸಂಹಿತೆ, ಪ್ರಚಾರ ಸಭೆಯ ನಿಯಮ ಉಲ್ಲಂಘಿಸಿ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಸನಾತನ ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡಿದ ಆರೋಪದಡಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತಕ್ಷೇತ್ರದ ಹಲಕಟ್ಟಾ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಏ.18ರಂದು ನಡೆದ ಪ್ರಚಾರ ಸಭೆಯಲ್ಲಿ ‘ಸನಾತನ ಧರ್ಮ ಕ್ಯಾನ್ಸರ್, ಏಡ್ಸ್, ಡೆಂಗಿ ಇದ್ದ ಹಾಗೆ. ಸನಾತನ ಧರ್ಮವನ್ನು ಬೀಜ ಸಮೇತ ಕಿತ್ತು ಹಾಕಬೇಕು’ ಎಂದು ಈ ಕ್ಷೇತ್ರದ ಮಂತ್ರಿ ಹೇಳಿಕೆ ನೀಡಿರುವುದಾಗಿ ಉಮೇಶ ಜಾಧವ ಹೇಳಿದ್ದಾರೆ’ ಎಂದು ಚುನಾವಣಾ ಎಫ್‌ಎಸ್‌ಟಿ ತಂಡದ ಅಧಿಕಾರಿ ಡಾ.ಶಂಕರ ಕಣ್ಣಿ ದೂರು ನೀಡಿದ್ದರು.

‘ಸನಾತನ ಧರ್ಮದ ಉಳಿವಿಗೆ, ನಮ್ಮ ಭವಿಷ್ಯಕ್ಕಾಗಿ, ದೇಶದ ಏಕತೆಗಾಗಿ, ನಮ್ಮ ಮುಂದಿನ ಪೀಳಿಗೆ, ಸುರಕ್ಷತೆ, ಮೋದಿಗಾಗಿ ಈ ಸಲ ಕಮಲದ ಹೂವಿಗೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಜಾಧವ ಭಾಷಣದಲ್ಲಿ ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ವಾಡಿ ಪೊಲೀಸ್ ಠಾಣೆಯಲ್ಲಿ ಕಲಂ 125, 123(3), ಆರ್‌ಪಿ ಕಾಯ್ದೆ ಕಲಂ 505(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT