ಸೋಮವಾರ, ಜನವರಿ 20, 2020
21 °C

ನಾಡಪಿಸ್ತೂಲ್: ಆರೋ‍ಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ನಾಡಪಿಸ್ತೂಲ್ ಇಟ್ಟುಕೊಂಡು ಕೋಳಕೂರ ಕ್ರಾಸ್ ಹತ್ತಿರದ ವರ್ತುಳ ರಸ್ತೆಯಲ್ಲಿ ತಿರುಗಾಡುತ್ತಿದ್ದ ಆರೋಪಿಯೊಬ್ಬನನ್ನು ಜೇವರ್ಗಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪಟ್ಟಣದ ಖಾಜಾ ಕಾಲೊನಿ ನಿವಾಸಿ, ಆಟೊ ಚಾಲಕ ರಾಕೇಶ ಕರಬಸಪ್ಪ ಗುಡೂರ (28) ಬಂಧಿತ. ಅವರ ಬಳಿ ₹ 15 ಸಾವಿರ ಮೌಲ್ಯದ ನಾಡಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಕೇಶನನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)