ಕಲಬುರ್ಗಿ: ಮಾಜಿ ಸಚಿವ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದ ದಿ.ವೈಜನಾಥ ಪಾಟೀಲ ಅವರ ಪತ್ನಿ ಜ್ನಾನೇಶ್ವರಿ ಪಾಟೀಲ (74) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು.

ವೈಜನಾಥ ಪಾಟೀಲ ಅವರಿಗೆ ಬೆನ್ನೆಲುಬಾಗಿದ್ದ ಜ್ಞಾನೇಶ್ವರಿ ಅವರು ಪಾಟೀಲ ಅವರ ಹಿಂಬಾಲಕರು ಮನೆಗೆ ಬಂದ ಸಂದರ್ಭದಲ್ಲಿ ಸ್ವತಃ ರೊಟ್ಟಿ ತಯಾರಿಸಿ ಊಟ ಬಡಿಸುತ್ತಿದ್ದರು.

ಬೀದರ್ ಜಿಲ್ಲೆಯ ಹಕ್ಯಾಳ ಗ್ರಾಮದ ವೈಜನಾಥ ಅವರು ಪತ್ನಿಯ ಊರಾದ ಚಿಂಚೋಳಿಯಲ್ಲೇ ನೆಲೆಸಿದ್ದರು. 200 ಎಕರೆಗೂ ಅಧಿಕ ಆಸ್ತಿಯ ಒಡತಿಯಾಗಿದ್ದ ಜ್ಞಾನೇಶ್ವರಿ ಅವರು ಸರ್ಕಾರಕ್ಕೆ ಉಚಿತವಾಗಿ ಜಮೀನು ಹಸ್ತಾಂತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.