ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ಚತುರ್ಥಿ: ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು

Published : 26 ಆಗಸ್ಟ್ 2024, 15:32 IST
Last Updated : 26 ಆಗಸ್ಟ್ 2024, 15:32 IST
ಫಾಲೋ ಮಾಡಿ
Comments

ಕಲಬುರಗಿ: ಗಣೇಶ ಚತುರ್ಥಿ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ಮತ್ತು ಕಲಬುರಗಿ ನಡುವೆ ಸೆಪ್ಟೆಂಬರ್ 5, 6 ಮತ್ತು 7ರಂದು ಒನ್‌ ಟ್ರಿಪ್ (ಒಂದು ಬಾರಿ) ವಿಶೇಷ ರೈಲು ಸಂಚರಿಸಲಿದೆ.

06589 ಸಂಖ್ಯೆಯ ರೈಲು ಸೆ. 5, 6 ಹಾಗೂ 7ರಂದು ಎಸ್‌ಎಂವಿಟಿಯಿಂದ ಹೊರಟು ಸೆ.6, 7 ಮತ್ತು 8ರಂದು ಬೆಳಿಗ್ಗೆ 7.40ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ. 06590 ಸಂಖ್ಯೆಯ ರೈಲು ಸೆ.6, 7 ಹಾಗೂ 8ರಂದು ಬೆಳಿಗ್ಗೆ 9.35ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನಗಳ ರಾತ್ರಿ 8ಕ್ಕೆ ಎಸ್‌ಎಂವಿಟಿ ನಿಲ್ದಾಣ ತಲುಪಲಿದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ನೈಋತ್ಯ ರೈಲ್ವೆ ತಿಳಿಸಿದೆ.

ಈ ವಿಶೇಷ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ ಹಾಗೂ ಶಹಾಬಾದ್‌ನಲ್ಲಿ ನಿಲುಗಡೆಯಾಗಲಿದೆ.

ಮುಂಗಡ ಬುಕ್ಕಿಂಗ್‌ ಮತ್ತು ವೇಳಾಪಟ್ಟಿ ಮಾಹಿತಿಗಾಗಿ www.enquiry.indianrail.gov.in ಜಾಲತಾಣಕ್ಕೆ ಭೇಟಿ ನೀಡಬಹುದು. ಅಥವಾ 139ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT