ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಾಫ್‌ ಬಜಾರ್‌: ನವೀಕೃತ ಗಣೇಶ ಮಂದಿರ ಲೋಕಾರ್ಪಣೆ 20ರಂದು

Last Updated 17 ಏಪ್ರಿಲ್ 2022, 4:27 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಸರಾಫ್ ಬಜಾರದಲ್ಲಿನ ನವೀಕರಿಸಲಾದ ಗಣೇಶ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಏ. 19 ಹಾಗೂ 20ರಂದು ನಡೆಯಲಿದೆಎಂದು ಸರಾಫ್‌ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ ತಿಳಿಸಿದ್ದಾರೆ.

19ರಂದು ಬೆಳಿಗ್ಗೆ 8 ಗಂಟೆಗೆ ನಗರದ ಮಾಯಾ ಮಂದಿರದಿಂದ ಸಕಲ ವಾದ್ಯಗಳೊಂದಿಗೆ ಕುಂಭ, ಕಳಸಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಕೋಟೆ ರಸ್ತೆ, ಕಪಡಾ ಬಜಾರ್‌ ಮುಖಾಂತರ ಸರಾಫ್ ಬಜಾರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ವಿವಿಧ ವರ್ತಕರು, ಸುವರ್ಣ ಕಾರ್ಖಾನೆಯವರು, ಸುವರ್ಣ ವ್ಯಾಪಾರೋದ್ಯಮಗಳು, ಸುವರ್ಣಕಾರರು ಸೇರಿದಂತೆ ಸೂಪರ್‌ ಮಾರ್ಕೆಟ್‌, ಕಿರಾಣಾ ಬಜಾರ್‌, ಕಪಡಾ ಬಜಾರ್‌, ಗಂಜ್ ಪ್ರದೇಶದ ವಿವಿಧ ವರ್ತಕರು ಮತ್ತು ಭಕ್ತರು ಭಾಗವಹಿಸುವರು. ಮೆರವಣಿಗೆ ನಂತರ ನವೀಕೃತ ಕಳಸಾರೋಹಣ ನಡೆಯಲಿದೆ. ಇಡೀ ದಿನ ಮಂದಿರದಲ್ಲಿ ಲೋಕ ಕಲ್ಯಾಣಕ್ಕಾಗಿ ಹೋಮ– ಹವನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಏ.20ರಂದು ಬೆಳಿಗ್ಗೆ 8 ಗಂಟೆಗೆ ವರಸಿದ್ಧಿ ವಿನಾಯಕನಿಗೆ ಮಹಾಭಿಷೇಕ ಹಾಗೂ ಮಂಗಳಾರತಿಯೊಂದಿಗೆ ಮಂದಿರದ ಲೋಕಾಪರ್ಣೆ ಕಾರ್ಯಕ್ರಮ ಆರಂಭವಾಗುವುದು. 10.30ಕ್ಕೆ ಧಾರ್ಮಿಕ ಕಾರ್ಯಕ್ರಮ, ದಾನಿಗಳ ಸನ್ಮಾನ, ಭಕ್ತಾದಿಗಳಿಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ. ಸಂಘದಉಪಾಧ್ಯಕ್ಷ ನಾಗೇಂದ್ರಪ್ಪ ಪಾಟೀಲ, ಶಾಮ ಪವಸ್ಕರ, ವೆಂಕಟೇಶ ರಾಮಚಂದ್ರ ಅಮ್ಮಣ್ಣ, ಕೇಶವ
ಹಾವಣಪ್ಪ ಸೀತನೂರ ಅವರು ಕಾರ್ಯಕ್ರಮಗಳ ಮುಂದಾಳತ್ವ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸರಾಫ್‌ ಬಜಾರ್‌ದ ಸುವರ್ಣ ವ್ಯಾಪಾರಿಗಳು ಸೇರಿಕೊಂಡು ಈ ಮಂದಿರವನ್ನು ನವೀಕರಣ ಮಾಡಿಸಿದ್ದು, ಅತ್ಯಂತ ಮನಮೋಹಕವಾಗಿದೆ.1944ರಲ್ಲಿ ಈ ಗಣೇಶ ಮಂದಿರ ಕಟ್ಟಲಾಗಿತ್ತು. ನಿತ್ಯವೂ ವರ್ತಕರು ಇಲ್ಲಿ ಪೂಜಾ ಕೈಂಕರ್ಯ ನಡೆಸಿಕೊಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT