ಕಲಬುರ್ಗಿ: ದಕ್ಷಿಣ ಕನ್ನಡ ಸಂಘದಿಂದ ನಗರದಲ್ಲಿ ಶುಕ್ರವಾರ 56ನೇ ಗಣೇಶೋತ್ಸವವನ್ನು ಸರಳ, ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಗಣಹೋಮ, ಪೂರ್ಣಾಹುತಿಯ ನಂತರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ಗಣೇಶೋತ್ಸವದ ಅಂಗವಾಗಿ ಸಾಮೂಹಿಕ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ರಾತ್ರಿ ಮಹಾಪೂಜೆಯ ನಂತರ ವಿಗ್ರಹ ವಿಸರ್ಜನೆ ಮಾಡಲಾಯಿತು.

ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಸತೀಶ್ ಬೀಡು ಮಾತನಾಡಿ, ದಕ್ಷಿಣ ಕನ್ನಡ ಸಂಘದವರು ಒಟ್ಟಾಗಿ ಈ ರೀತಿ ಹಬ್ಬ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರೂ ಒಂದಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.

ಸಂಘದ ಅಧ್ಯಕ್ಷ ಸದಾನಂದ ಪೆರ್ಲ ಮಾತನಾಡಿ, ನಗರದಲ್ಲಿ ದಕ್ಷಿಣ ಕನ್ನಡ ಸಂಘದಿಂದ ಮೂರು ತಿಂಗಳಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಲಾಗುವುದು ಎಂದರು.

ಸಂಘದ ಕಾರ್ಯಕ್ರಮಗಳಲ್ಲಿ ಸಂಘದ ಎಲ್ಲ ಸದಸ್ಯರು ಭಾಗವಹಿಸಬೇಕು. ಒಂದೊಂದು ಮನೆಯಿಂದ ಪ್ರತಿ ದಿನ ಒಂದು ರೂಪಾಯಿ ಸಂಗ್ರಹಿಸಿ ಸಂಘದ ಅಭಿವೃದ್ಧಿಗೆ ನೀಡಬೇಕು. ನಗರದಲ್ಲಿ ಸಂಘಕ್ಕೆ ನಿವೇಶನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅವರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್ ಅವರಿಗೆ ಸೂಚಿಸಿದ್ದಾರೆ. ಶೀಘ್ರ ನಿವೇಶನ ಸಿಗುವ ವಿಶ್ವಾಸ ಇದೆ ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ವಿಜೇತ ದತ್ತು ಅಗರ್ ವಾಲ್ ಅವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವದ ಅಂಗವಾಗಿ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ, ಕಾರ್ಯದರ್ಶಿಗಳಾದ ಜೀವನ್‌ಕುಮಾರ್ ಜತ್ತನ್, ಲಕ್ಷ್ಮಿ ಪ್ರಶಾಂತ ಪೈ, ಸಹ ಕಾರ್ಯದರ್ಶಿ ಮಮತಾ ಬಾಬುರಾವ್ ಯಡ್ರಾಮಿ, ಸಂಘದ ಸದಸ್ಯರಾದ ವಿ.ಕೆ.ಕೆದಿಲಾಯ, ವಿದ್ಯಾರಾಣಿ ಭಟ್, ಶ್ರೀನಿವಾಸ ಆಚಾರ್ಯ ಇದ್ದರು.

ವಿವಿಧ ಸ್ಪರ್ಧೆಗಳ ವಿಜೇತರು: ಚಿತ್ರಕಲಾ ಸ್ಪರ್ಧೆ (ಒಂದರಿಂದ ಆರು ವರ್ಷ): ಪ್ರಣತಿ ಬಾಬುರಾವ್ ಯಡ್ರಾಮಿ (ಪ್ರಥಮ), ಶೈವ್ ಆರ್.ಕಡೇಚೂರ್ (ದ್ವಿತೀಯ), ಆಯಾನ್ಯ ಎಸ್.ಜತ್ತನ್ (ತೃತೀಯ).
ಏಳರಿಂದ 14 ವರ್ಷ: ಸ್ವಸ್ತಿಕ ಪೂಜಾರಿ (ಪ್ರಥಮ), ತನುಷಾ ಡಿ.ಕಡೇಚೂರು (ದ್ವಿತೀಯ), ದಾಮೋದರ ಬಾಳಿಗಾ (ತೃತೀಯ).

ಸಂಗೀತ ಕುರ್ಚಿ ಸ್ಪರ್ಧೆ (ಮೂರರಿಂದ 14 ವರ್ಷ): ಸೃಷ್ಟಿ ಆರ್.ನಾಯಕ (ಪ್ರಥಮ), ಪ್ರಣತಿ ಬಾಬುರಾವ ಯಡ್ರಾಮಿ (ದ್ವಿತೀಯ), ಸುದೀಪ್ತಾ ಎಂ.ಭಟ್ (ತೃತೀಯ).

ಮಡಿಕೆ ಒಡೆಯುವ ಸ್ಪರ್ಧೆ (ಐದರಿಂದ 10 ವರ್ಷ): ಶಾವಿ ಕಡೇಚೂರು (ಪ್ರಥಮ), ರೃಥ್ವಿ ಕಡೇಚೂರು (ದ್ವಿತೀಯ). 10 ರಿಂದ 14 ವರ್ಷ: ತ್ರಿಷಾ ಕಡೇಚೂರು (ಪ್ರಥಮ), ಧೃತಿ ಕಡೇಚೂರು (ದ್ವಿತೀಯ).
ಸಂಗೀತ ಕುರ್ಚಿ (ಮಹಿಳೆಯರ ವಿಭಾಗ): ವಿದ್ಯಾರಾಣಿ ಭಟ್ (ಪ್ರಥಮ), ರೂಪಾ ಪಿ.ನಾಯಕ (ದ್ವಿತೀಯ), ಶ್ರಾವಣಾ ಭಟ್ (ತೃತೀಯ).

ಮಡಿಕೆ ಒಡೆಯುವ ಸ್ಪರ್ಧೆ (ಪುರುಷರ ವಿಭಾಗ): ಪರಿಕ್ಷಿತ್ ಭಟ್ (ಪ್ರಥಮ), ಕೀರ್ತಿ ಶೆಟ್ಟಿ (ದ್ವಿತೀಯ), ಪ್ರಶಾಂತಶೆಟ್ಟಿ ಇನ್ನಾ (ತೃತೀಯ).

ಮಡಿಕೆ ಒಡೆಯುವ ಸ್ಪರ್ಧೆ (ಮಹಿಳೆಯರ ವಿಭಾಗ): ಜಯಶ್ರೀ ಶೆಟ್ಟಿ (ಪ್ರಥಮ), ಕಾನುಪ್ರಿಯಾ ಕಡೇಚೂರು (ದ್ವಿತೀಯ), ಸಂಪ್ರಿತಾ ಭಟ್ (ತೃತೀಯ).
ಕರವಸ್ತ್ರ ಎತ್ತುವ ಸ್ಪರ್ಧೆ: ಸತ್ಯಣ್ಣ ಮತ್ತು ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.