ಮಂಗಳವಾರ, ಮೇ 18, 2021
29 °C

ಕಲಬುರ್ಗಿ: ಜಿಲ್ಲೆಗೆ 600 ರೆಮಿಡಿಸಿವರ್‌ ಇಂಜೆಕ್ಷನ್ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ನೀಡಲಾಗುವ ರೆಮಿಡಿಸಿವಿರ್ ಇಂಜೆಕ್ಷನ್‌ಗಳ ಅಭಾವ ಉಂಟಾದ ಪ್ರಯುಕ್ತ ಸಂಸದ ಡಾ.ಉಮೇಶ ಜಾಧವ್ ಅವರು ಬೆಂಗಳೂರಿನಲ್ಲಿರುವ ಕೊರೊನಾ ವಾರ್‌ ರೂಮ್‌ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವಿವರಿಸಿದ ಬಳಿಕ 600 ವಯಲ್ಸ್ ರೆಮಿಡಿಸಿವಿರ್ ಇಂಜೆಕ್ಷನ್‌ ಜಿಲ್ಲೆಗೆ ರವಾನೆಯಾಗಿದೆ.

ಇಂಜೆಕ್ಷನ್ ಇಲ್ಲದಿರುವ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಅವರಿಂದ ಮಾಹಿತಿ ಪಡೆದ ಸಂಸದ ಡಾ. ಜಾಧವ ಕೊರೊನಾ ವಾರ್‌ ರೂಮ್‌ನಲ್ಲಿದ್ದ ಉಪ ಔಷಧ ನಿಯಂತ್ರಕ ಕೆಂಪಯ್ಯ ಸುರೇಶ್ ಹಾಗೂ ಆಕ್ಸಿಜನ್ ಪೂರೈಕೆ ಜವಾಬ್ದಾರಿ ಹೊತ್ತಿರುವ ಅಂಬರೀಶ ತುಂಬಗಿ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದರು.

ಜಿಲ್ಲೆಯ 20 ಆಸ್ಪತ್ರೆಗಳಿಗೆ ಬೇಕಾದ 1100 ವಯಲ್ಸ್ ರೆಮಿಡಿಸಿವಿರ್ ಇಂಜೆಕ್ಷನ್‌ಗಳನ್ನು ಪೂರೈಸುವಂತೆ ಕಲಬುರ್ಗಿಯ ಸಹಾಯಕ ಔಷಧ ನಿಯಂತ್ರಕರು ಏಪ್ರಿಲ್ 20ರಂದು ಬೇಡಿಕೆ ಇಟ್ಟಿದ್ದರೂ ಇನ್ನೂ ತಲುಪಿಲ್ಲ ಎಂಬ ಅಂಶವನ್ನು ಗಮನಕ್ಕೆ ತಂದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ತಕ್ಷಣಕ್ಕೆ 600 ಇಂಜೆಕ್ಷನ್‌ಗಳನ್ನು ಕಳಿಸಿಕೊಟ್ಟರು. ಶುಕ್ರವಾರ ಇವು ಜಿಲ್ಲೆಯನ್ನು ತಲುಪಲಿವೆ ಎಂದು ಜಾಧವ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.