ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಕಲಬುರಗಿ ತಾಲ್ಲೂಕಿನ ಚುನಾವಣೆಯ ಮತದಾನವು 32 ಮತಗಟ್ಟೆಗಳಲ್ಲಿ ಶನಿವಾರ ನಡೆಯಿತು.

ತಾಲ್ಲೂಕು ವಿಭಾಗದ 66 ಸ್ಥಾನಗಳಿಗೆ ಒಟ್ಟು 142 ಆಕಾಂಕ್ಷಿಗಳು ಸ್ಪರ್ಧಿಸಿದ್ದರು. ಅವರಲ್ಲಿ 24 ಸ್ಪರ್ಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 118 ಸ್ಪರ್ಧಿಗಳು ಚುನಾವಣೆ ಕಣದಲ್ಲಿದ್ದರು. ಒಟ್ಟು 4,153 ಮತದಾರರ ಪೈಕಿ ಕೆಲವರು ಗೈರಾಗಿದ್ದರು.

ಒಟ್ಟು 32 ಇಲಾಖೆಗಳ ಪೈಕಿ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಕರ ವಿಭಾಗದಲ್ಲಿ 1,138 ಹಾಗೂ ಪ್ರೌಢಶಾಲೆ ವಿಭಾಗದಲ್ಲಿ 576 ಅತ್ಯಧಿಕ ಮತದಾರರು ಇದ್ದರು. ನಂತರದ ಸ್ಥಾನದಲ್ಲಿ ಆರೋಗ್ಯ ಇಲಾಖೆಯು 410 ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯು 305 ಮತದಾರರನ್ನು ಹೊಂದಿದ್ದವು.

ರಾತ್ರಿ 10.40ರ ವರೆಗೆ ನಡೆದ ಮತದಾನ ಎಣಿಕೆಯಲ್ಲಿ ಒಟ್ಟು ಚುನಾವಣೆಯಲ್ಲಿ 33 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪ್ರಾಥಮಿಕ ವಿಭಾಗದ ಐವರು ಹಾಗೂ ಆರೋಗ್ಯ ಇಲಾಖೆಯ ನಾಲ್ವರು ಸೇರಿ 9 ಅಭ್ಯರ್ಥಿಗಳ ಮತಗಳ ಎಣಿಕೆ ಇನ್ನೂ ನಡೆಯುತ್ತಿತ್ತು.

ಆಯ್ಕೆಯಾದವರು: ಎಸ್.ಜಿ. ಚೇಗುಂಡೆಮ (ಕೃಷಿ), ವಿಜಯಕುಮಾರ ಎಸ್. (ಪಶುಪಾಲನಾ), ಕೃಷ್ಣಚಾರ್ಯ ಜಿ.ಪೂಜಾರಿ (ಆಹಾರ ಸರಬರಾಜು), ಪೂರ್ಣಚಂದ್ರ (ವಾಣಿಜ್ಯ), ಬಸವರಾಜ (ಸಹಕಾರ), ಮಲ್ಲಿಕಾರ್ಜುನ ಎಚ್. (ಅಬಕಾರಿ), ಸಂತೋಷ ಕುಮಾರ (ಸಮಾಜ ಕಲ್ಯಾಣ), ಆನಂದ ರವಿಕುಮಾರ (ಹಿಂದುಳಿದ), ವೇಸ್ಲಿ ದೇವರಾಜ (ಮೀನುಗಾರಿಕೆ), ರಮೇಶ ಹಳೆಕೇರಿ (ಅರಣ್ಯ), ಡಾ.ಕೆ.ಬಿ. ಬಬಲಾದ (ಆಯುಷ್), ಸಂಜೀವರೆಡ್ಡಿ (ತೋಟಗಾರಿಕೆ) ಹಾಗೂ ವೀರಶೆಟ್ಟಿ ಬಿರಮಣಿ (ಕೈಗಾರಿಕೆ ಮತ್ತು ವಾಣಿಜ್ಯ) ಅವರು ಆಯ್ಕೆಯಾಗಿದ್ದಾರೆ.

ರಾಜರತ್ನ ಡಿ.ಕೆ. (ವಾರ್ತಾ), ದೀಪಕ್ ಎಂ.ಕಮತಾರ (ಗ್ರಂಥಾಲಯ), ಮಹೇಶ ಬಸಕೋಡ (ಪ್ರೌಢ ಶಾಲೆ; ಬೋಧಕ), ಗೋಪಾಲ (ಬೋಧಕೇತರ), ಧರ್ಮರಾಯ ಜವಳಿ (ಪದವಿ ಪೂರ್ವ), ಶಿವಾನಂದ ಕೆ.ಸ್ವಾಮಿ(ಪದವಿ ಕಾಲೇಜು), ಎಂ.ಬಿ. ಪಾಟೀಲ (ತಾಂತ್ರಿಕ ಶಿಕ್ಷಣ), ಪದ್ಮರಾಜ (ಮುದ್ರಾಂಕ), ಕೃಷ್ಣಪ್ಪ (ಪೊಲೀಸ್), ಸಂದೀಪ ಪಾರಾ (ರಾಜ್ಯ ಲೆಕ್ಕ ಪರಿಶೋಧನೆ), ರೇವಣಸಿದ್ದ (ಭೂಮಾಪನ), ಮಲ್ಲಿಕಾರ್ಜುನ (ಖಜಾನೆ), ಸುರೇಶ ವಗ್ಗೆ (ಉದ್ಯೋಗ & ತರಬೇತಿ), ಯಲ್ಲಪ್ಪ (ಧಾರ್ಮಿಕ ದತ್ತಿ), ಸುನಿಲ್ಕುಮಾರ (ನ್ಯಾಯಾಂಗ), ಹಣಮಂತ ಲೇಂಗಟಿ (ಅಕ್ಷರ ದಾಸೋಹ), ರಾಚಣ್ಣ ಬಿ. (ವೈದ್ಯಕೀಯ ಶಿಕ್ಷಣ), ಆನಂದ ಕುಮಾರ (ಲಸಿಕೆ ಸಿಬ್ಬಂದಿ) ಮತ್ತು ಪ್ರಭುಮಠ (ಆರೋಗ್ಯ) ಅವರು ಗೆದ್ದಿದ್ದಾರೆ.

ಲಾಟರಿ ಮೊರೆ: ವಿಮಾ ಇಲಾಖೆಯ ಸಿದ್ದಲಿಂಗಯ್ಯ ಹಾಗೂ ನೀಖಿತ್ ಬಾನು ಅವರು ತಲಾ 10 ಮತಗಳು ಪಡೆದಿದ್ದರು. ಚುನಾವಣೆ ಅಧಿಕಾರಿಗಳು ಲಾಟರಿ ಮೊರೆ ಹೋದಾಗ ಸಿದ್ದಲಿಂಗಯ್ಯ ಅವರಿಗೆ ವಿಜಯ ಒಲಿಯಿತು.

ಚುನಾವಣಾ ಅಧಿಕಾರಿಯಾಗಿ ಎಚ್.ವೀರಭದ್ರಪ್ಪ, ಸಹಾಯಕ ಅಧಿಕಾರಿಯಾಗಿ ರವಿ ಕುಲಕರ್ಣಿ ಅವರು ಕಾರ್ಯನಿರ್ವಹಿಸಿದರು.

ಅವಿರೋಧವಾಗಿ ಆಯ್ಕೆಯಾದವರು

ಕಲಬುರಗಿ ತಾಲ್ಲೂಕು ವಿಭಾಗದಿಂದ ಕಾರ್ಯಕಾರಿ ಸಮಿತಿಗೆ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೀರಪ್ಪ ಅಬ್ದುಲ್ ವಾಹಿಬ್ ರಾಜು ಪಿ.ಗೋಪಣೆ ಶ್ರೀಮಂತ ದಾದಾಗೌಡ ಸಿ.ಬಿರಾದಾರ ಪ್ರಕಾಶ ಸುರೇಶ ಎಲ್.ಶರ್ಮಾ ಅರುಣಕುಮಾರ ಪಾಟೀಲ ಹರೀಶ ಗುರುಶರಣ ವಿಕಾಸ ಸಜ್ಜನ ರೇವಣಸಿದ್ದಪ್ಪ ಕಲ್ಲಪ್ಪಗೌಡರ ಸಿದ್ಧರಾಮ ಬಿ.ಚಿಂಚೋಳಿ ಪ್ರೇಮಾನಂದ ಚಿಂಚೋಳಿಕರ್ ರಾಘವೇಂದ್ರ ಶಿವಾನಂದ ಎಂ.ಎಸ್ ಮೋತಿಲಾಲ್ ಎಲ್.ಚವ್ಹಾಣ್ ಸುಭಾಶ್ಚಂದ್ರ ಅಣವೀರಪ್ಪ ಬಿ.ಕುಮಸಿ ಭೀಮಾಶಂಕರ ಶಶಿಕಾಂತ ಹೋಳಕರ ಭೀಮಾಶಂಕರ ವಿಜಯಕುಮಾರ ಮತ್ತು ಮಲ್ಲಿನಾಥ ಮಂಗಲಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.