ಗುಲಬರ್ಗಾ ವಿ.ವಿ.: ಪ್ರವೇಶ ಪರೀಕ್ಷೆ ಆರಂಭ

ಗುರುವಾರ , ಜೂಲೈ 18, 2019
28 °C
ವಿದ್ಯಾರ್ಥಿಗಳ ಆಸನ ವಿವರ ವೆಬ್‌ಸೈಟ್‌ನಲ್ಲಿ ಪ್ರಕಟ; ಸಹಾಯವಾಣಿ ಆರಂಭ

ಗುಲಬರ್ಗಾ ವಿ.ವಿ.: ಪ್ರವೇಶ ಪರೀಕ್ಷೆ ಆರಂಭ

Published:
Updated:

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ 22 ಸ್ನಾತಕೋತ್ತರ ವಿಭಾಗಗಳ ಪ್ರವೇಶಕ್ಕಾಗಿ ಇದೇ 12ರಿಂದ 18ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. 

ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿಗಾಗಿ ಒಟ್ಟು 12,107 ಅರ್ಜಿಗಳು ಬಂದಿದ್ದು, ಇದರಲ್ಲಿ ಪ್ರವೇಶ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆ ರಹಿತ ವಿಷಯಗಳಿಗೆ ಒಟ್ಟು 10,261 ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಿದ್ದಾರೆ. 8,939 ವಿದ್ಯಾರ್ಥಿಗಳು 22 ಸ್ನಾತಕೋತ್ತರ ವಿಭಾಗಳ ವಿಷಯಗಳಿಗಾಗಿ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸುವರು ಎಂದು ವಿ.ವಿ. ಪ್ರಭಾರ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿ ತಿಳಿಸಿದ್ದಾರೆ. 

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಬ್ಲಾಕ್ ಹಾಗೂ ಯೂನಿಟ್‌ವಾರು ಪಟ್ಟಿಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಯು ತನ್ನ ಪರೀಕ್ಷೆಯ ಕೊಠಡಿಯನ್ನು ತಿಳಿದುಕೊಳ್ಳುವ ಸಲುವಾಗಿ ವಿಶ್ವವಿದ್ಯಾಲಯದ ಪ್ರವೇಶಾತಿ ಪೋರ್ಟಲ್‌ನಲ್ಲಿ ನೋಂದಣಿ ಸಂಖ್ಯೆಯನ್ನು ನಮೂದಿಸಿ ತಿಳಿದುಕೊಳ್ಳಬಹುದು.

ವಿದ್ಯಾರ್ಥಿಗಳ ಮಾಹಿತಿಗಾಗಿ ಪಠ್ಯಕ್ರಮ, ಒಎಂಆರ್‌ ಶೀಟ್‌ ನಮೂನೆ ಜೊತೆಗೆ ಪ್ರವೇಶ ಪರೀಕ್ಷೆ ಸೂಚನೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಹ್ಯೂಮಾನಿಟಿಸ್ ಬಿಲ್ಡಿಂಗ್ ಹತ್ತಿರವಿರುವ ಬಸ್ ನಿಲ್ದಾಣದ ಪಕ್ಕ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !