ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಜಿಲ್ಲೆಯಾದ್ಯಂತ ವೈಭವದ ಹನುಮ ಜಯಂತಿ

ಬಾಲ ಹನುಮಾನ ತೊಟ್ಟಿಲು ಸೇವೆ: ಎಲ್ಲೆಡೆ ಅನ್ನ ಸಂತರ್ಪಣೆ
Published : 13 ಏಪ್ರಿಲ್ 2025, 4:00 IST
Last Updated : 13 ಏಪ್ರಿಲ್ 2025, 4:00 IST
ಫಾಲೋ ಮಾಡಿ
Comments
ಕಲಬುರಗಿ ನಗರದ ಗುಬ್ಬಿ ಕಾಲೊನಿಯ ಸ್ಮಶಾನ ಹನುಮಾನ ದೇವಸ್ಥಾನ ಆವರಣದಲ್ಲಿ ಶನಿವಾರ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು
ಕಲಬುರಗಿ ನಗರದ ಗುಬ್ಬಿ ಕಾಲೊನಿಯ ಸ್ಮಶಾನ ಹನುಮಾನ ದೇವಸ್ಥಾನ ಆವರಣದಲ್ಲಿ ಶನಿವಾರ ದೇವಸ್ಥಾನ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರು ಭಕ್ತರಿಗೆ ಅನ್ನಸಂತರ್ಪಣೆ ಮಾಡಿದರು
ಕಲಬುರಗಿಯಲ್ಲಿ ಶನಿವಾರ ಹನುಮಾನ ಜಯಂತಿ ಅಂಗವಾಗಿ ಕೋರಂಟಿ ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸಿದ ಅರ್ಚಕರು
ಕಲಬುರಗಿಯಲ್ಲಿ ಶನಿವಾರ ಹನುಮಾನ ಜಯಂತಿ ಅಂಗವಾಗಿ ಕೋರಂಟಿ ಹನುಮಾನ ಮೂರ್ತಿಗೆ ಪೂಜೆ ಸಲ್ಲಿಸಿದ ಅರ್ಚಕರು
ಕಲಬುರಗಿಯ ಕೋರಂಟಿ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ರಥೋತ್ಸವ ಪ್ರಜಾವಾಣಿ ಚಿತ್ರ
ಕಲಬುರಗಿಯ ಕೋರಂಟಿ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ರಥೋತ್ಸವ ಪ್ರಜಾವಾಣಿ ಚಿತ್ರ
ಕೋರಂಟಿಯಲ್ಲಿ ಜಾತ್ರೆ ವಾತಾವರಣ
ಕೋರಂಟಿ ಹನುಮಾನ ದೇಗುಲದಲ್ಲಿ ಇಡೀ ದಿನ ಜಾತ್ರೆಯ ಸಂಭ್ರಮದ ವಾತಾವರಣ ಕಂಡುಬಂತು. ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಬಂದ ಭಕ್ತರು ಪ್ರವೇಶ ದ್ವಾರದಿಂದ ರಥದ ಮನೆಯರೆಗೆ ಎರಡು ಸರತಿ ಸಾಲಿನಲ್ಲಿ ನಿಂತಿದ್ದರು. ಹೂ ಹಣ್ಣು ಕಾಯಿ ಕರ್ಪೂರ ಹಿಡಿದು ಗಂಟೆಗಟ್ಟಲೇ ಕಾದು ದೇವರ ದರ್ಶನ ಪಡೆದರು. ಪ್ರಖರ ಬಿಸಿಲಿನಲ್ಲಿಯೂ ಬೃಹತ್ ಮೂರ್ತಿಯ ಪ್ರದಕ್ಷಿಣೆ ಹಾಕಿ ಮೂರ್ತಿಯ ಮುಂದೆ ನಿಂತು ಫೋಟೊ ತೆಗೆದುಕೊಂಡರು. ದೇವಸ್ಥಾನ ಆವರಣವೂ ಇಡೀ ದಿನ ಜನದಟ್ಟಣೆಯಿಂದ ಕೂಡಿತ್ತು. ಸಂಜೆ ಸಾವಿರಾರು ಜನರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಕುಂಭಮೇಳ ಕಳಸ ಪ್ರತಿಷ್ಠಾಪನೆ
ಬೃಂದಾವನ ಲೇಔಟ್‌ನಲ್ಲಿ ಹನುಮಾನ ಮಂದಿರದಲ್ಲಿ ಮಹಿಳೆಯರು ಕುಂಬಮೇಳ ನಡೆಸಿಕೊಟ್ಟರು. ಆಲಮೇಲದ ಮೂರುಜಾವ ಮಠದ ರಾಮಚಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು. ಮುಖಂಡರಾದ ಮನೋಹರ ಪೊದ್ದಾರ ಮಹಾದೇವಪ್ಪ ಅಂಗಡಿ ಗುರಣ್ಣ ಕೋಳಕೂರ್ ಶಾಂತಪ್ಪ ಗೂಳಿ ಸಿದ್ದಣ್ಣ ಹೂಗಾರ ರಘುವೀರ ಕುಲಕರ್ಣಿ ಬಸವರಾಜ್ ದೇವತಕಲ್ ಬಸನಗೌಡ ಶಿವಕುಮಾರ ಮಠಪತಿ ಕವಿರಾಜ್ ಬಿರಾದಾರ ಹೊನ್ನಪ್ಪ ಸೇರಿ ಹಲವರು ಪಾಲ್ಗೊಂಡಿದ್ದರು. ಎನ್‌ಜಿಒ ಕಾಲೊನಿಯಲ್ಲಿ ಜೈ ಉಗ್ರ ಹನುಮಾನ ಸೇವಾ ಸಮಿತಿ ವತಿಯಿಂದ ತೊಟ್ಟಿಲು ಸೇವೆ ಭವ್ಯ ಮರೆವಣಿಗೆಯೊಂದಿಗೆ ಹನುಮಾನ ದೇವಸ್ಥಾನದ ಕಳಸ ಪ್ರತಿಷ್ಠಾಪನೆ ಮಾಡಲಾಯಿತು. ಪುರವಂತರ ಪೂಜೆಯ ಬಳಿಕ ರಥೋತ್ಸವ ಜರುಗಿತು. ಸಮಿತಿಯ ಅಧ್ಯಕ್ಷ ರುದ್ರಗೌಡ ಮಾಲಿಪಾಟೀಲ ಉಪಾಧ್ಯಕ್ಷ ಹಣಮಂತರಾಯ ಕೋಬಾಳ ಕಾರ್ಯದರ್ಶಿ ಬಸವರಾಜ ಕೆ ಬಿರಾದಾರ ಸಕ್ರಪ್ಪಗೌಡ ವಿಜಯಕುಮಾರ ಬಂಗಾರಶೆಟ್ಟಿ ನೀಲಕಂಠ ಅವಂತಿ ಸಂತೋಷ ಹರವಾಳ ಸತೀಶ ಹರವಾಳ ಬಿ.ಎಸ್. ಪಾಟೀಲ ರಾಜು ದೇವದುರ್ಗ ಮಹೇಶ ಹರವಾಳ ನಾಗೇಶ ವಾರದ್ ಸೇರಿ ಹಲವರು ಪಾಲ್ಗೊಂಡಿದ್ದರು. ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಅರ್ಚಕ ಗುಂಡಾಚಾರ್ಯ ನರಿಬೋಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ವೆಂಕಣ್ಣಚಾರ್ಯ ಮಳಖೇಡ ಅವರು ಸುಂದರಕಾಂಡ ಪ್ರವಚನ ನಡೆಸಿಕೊಟ್ಟರು. ಪ್ರಮುಖರಾದ ಡಿ.ವಿ. ಕುಲಕರ್ಣಿ ವೀರಣ್ಣ ಹೊನ್ನಳ್ಳಿ ಭೀಮಸೇನರಾವ ದೇವಡಿ ಗೋಪಾಲರಾವ ಕುಲಕರ್ಣಿ ಶಾಮರಾವ್ ಕುಲಕರ್ಣಿ ಶ್ರೀನಿವಾಸ ನೆಲೋಗಿ ಭೀಮಾಚಾರ್ಯ ಜೋಶಿ ಪ್ರಮೋದ ಪಂತ ಸೇರಿ ಹಲವರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT