ಸೋಮವಾರ, ಮೇ 16, 2022
27 °C

ಕಲಬುರಗಿ: ಸಂಭ್ರಮದ ಹನುಮ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಳಗುಂಡಗಿ (ಯಡ್ರಾಮಿ ತಾಲ್ಲೂಕು): ಗ್ರಾಮದ ಭೋವಿ ಸಮಾಜದ ಗೆಳೆಯರ ಬಳಗದಿಂದ ಶನಿವಾರ ಹನುಮಾನ್‌ ಜಯಂತಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ವೆಂಕಟೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಭಾಜಾ ಭಜಂತ್ರಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮುಖಂಡರಾದ ಬಸವರಾಜಗೌಡ ಮಾಲಿಪಾಟೀಲ, ಶರಣಗೌಡ ಹಿರೇಗೌಡರ ಅವರು ಹನುಮಾನ್‌ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು.

ನಿಂಗರಾಜ ಕಡಿ, ಗಿರಿಜಾ ಶಂಕರ್ ರಾಮನಗೌಡರ, ಗೊಲ್ಲಾಳಪ್ಪ ಕಡಿ, ಬಸವಂತರಾಯ ಜೊತಪಗೌಡರ, ಮಡಿವಾಳಪ್ಪಗೌಡ ಮಾಲಿಪಾಟೀಲ, ಸಂತೋಷ ಗತ್ತರಗಿ, ನಾಗನಗೌಡ ಮುದಬಸಗೊಳ, ಲಕ್ಷ್ಮಣ ಕಲ್ಲೂರ, ಆನಂದ ದೇವರಮನಿ, ಯಲ್ಲಪ್ಪ ಕಡಕೋಳ, ತಿರುಪತಿ ದೇವರಮನಿ, ರಾಮು ಯಡ್ರಾಮಿ, ರವಿ ಹಿಪ್ಪರಗಿ, ದುರ್ಯೋಧನ ಮರಾಠಿ, ಶಿವಾನಂದ ಅವಂಟಿ, ಈರಣ್ಣಗೌಡ ಮಾಲಿಪಾಟೀಲ, ಸಂತೋಷ ಪೊಲೀಸ್ ಪಾಟೀಲ, ಅಂಬರೀಶ ಇಸಾಂಪೂರ, ಮಾಳು ಪೂಜಾರಿ, ಶಿವಲಿಂಗ ಹೂಗಾರ ಹಾಗೂ ಭಕ್ತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು