ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ವರುಣನ ಅಬ್ಬರ ಮುಂದುವರೆದಿದ್ದು, ಚಿತ್ತಾಪುರ ತಾಲ್ಲೂಕಿನಲ್ಲಿ ಮನೆಗಳು ಉರುಳಿ ಬಿದ್ದಿವೆ. ಕಮಲಾಪುರ ತಾಲ್ಲೂಕಿನ ಕುದಮೂಡ ಗ್ರಾಮದಲ್ಲಿ ಪ್ರವಾಹ ಉಂಟಾಗಿ ಹಳ್ಳದ ನೀರು ಸೇತುವೆ ಮೇಲೆ ಉಕ್ಕಿ ಹರಿದಿದ್ದರಿಂದ ಸೇತುವೆ ದಾಟುತ್ತಿದ್ದ ಕೆಲವು ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.

ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಶನಿವಾರ ರಾತ್ರಿ 1200 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದು ಜನ ಜಾನುವಾರು ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ ನಗರದಲ್ಲಿಯೂ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದ ತನಕ ಸುರಿದ ಮಳೆಯಿಂದಾಗಿ ಹಲವು ನಗರದ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಯಿತು.

ಸತತ ಮಳೆ; ಮನೆಗಳಿಗೆ ಹಾನಿ

ಚಿತ್ತಾಪುರ: ಕಳೆದ ಮೂರು ದಿನಗಳಿಂದ ಸತತವಾಗಿ ಸುರಿದ ಧಾರಾಕಾರ ಮಳೆಗೆ ಶುಕ್ರವಾರ ರಾತ್ರಿ ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ನರಸಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆ ಬಿದ್ದ ಕುರಿತು ಮೇಲಧಿಕಾರಿಗಳಿಗೆ ನಿಯಮಾನುಸಾರ ವರದಿ ನೀಡುವುದಾಗಿ ಕುಟುಂಬಸ್ತರಿಗೆ ತಿಳಿಸಿದ್ದಾರೆ.

ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಲಗಳು ಕೆಸರು ಗದ್ದೆಯಂತಾಗಿವೆ. ರೈತರು ಹೊಲದತ್ತ ಹೋಗದಂತೆ ವಾತಾವರಣ ಸೃಷ್ಟಿಯಾಗಿದ್ದು, ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಂತರ ಮಳೆ ನಿರಾಸೆ ಮೂಡಿಸಿದೆ.

1200 ಕ್ಯೂಸೆಕ್ ನೀರು ಬಿಡುಗಡೆ

ಚಿಂಚೋಳಿ: ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಶನಿವಾರ ರಾತ್ರಿ 1200 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಇದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದು ಜನ ಜಾನುವಾರು ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಯೋಜನಾಧಿಕಾರಿಗಳಾದ ಅಮೃತ ಪವಾರ್ ಹಾಗೂ ವಿನಾಯಕ ಚವ್ಹಾಣ ಮನವಿ ಮಾಡಿದ್ದಾರೆ.

ಜಲಾಶಯಕ್ಕೆ 652 ಕ್ಯೂಸೆಕ್ ಒಳ ಹರಿವು ಇದ್ದು, ಜಲಾಶಯದ ಹಿಂಭಾಗದಲ್ಲಿ ಸಾಕಷ್ಟು ಮಳೆಯಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ.

ಸದ್ಯ ಜಲಾಶಯದ ನೀರಿನ ಮಟ್ಟ 489.65 ಮೀಟರ್ ಇದ್ದು, ಬೆಳಗಿನವರೆಗೆ ನೀರು ಹೊರ ಬಿಟ್ಟ ಮೇಲೆ 489.50 ಮೀಟರ್ ನೀರಿನ ಮಟ್ಟ ಕಾಪಾಡಿಕೊಂಡು ಹೊರ ಹರಿವು ನಿಲ್ಲಿಸಲಾಗುವುದು ಎಂದರು.

ಜನ ಜೀವನ ಅಸ್ತವ್ಯಸ್ತ: ತಾಲ್ಲೂಕಿನಲ್ಲಿ ಶನಿವಾರ ಬೆಳಿಗ್ಗೆ 5 ಗಂಟೆಯಿಂದಲೇ ಜೋರು ಮಳೆ ಸುರಿಯಿತು. ಇದರಿಂದ ಜನ ಜೀವನ ಅಸ್ತವ್ಯಸ್ತವಾದರೆ, ಶಾಲಾ ಮಕ್ಕಳು ಸುರಿಯುವ ಮಳೆಯಲ್ಲಿಯೇ ಅಟೊಗಳಲ್ಲಿ ಶಾಲೆಗಳಿಗೆ ತೆರಳಿದ್ದು ಗೋಚರಿಸಿತು. ಮಳೆ ಮಧ್ಯಾಹ್ನ 2 ಗಂಟೆಯಿಂದ ಬಿಡುವು ನೀಡಿದ್ದು ಜನ ನಿರಾಳರಾಗುವಂತೆ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಕುಂಚಾವರಂ 80.2 ಮಿ.ಮೀ., ಚಿಂಚೋಳಿ 44.4, ನಿಡಗುಂದಾ 42.8, ಐನಾಪುರ ಮತ್ತು ಚಿಮ್ಮನಚೋಡ 38.5, ಕೋಡ್ಲಿ 28 ಹಾಗೂ ಸುಲೇಪೇಟ 23.8 ಮಿ.ಮೀ. ಮಳೆಯಾಗಿದೆ.

ನಿರಂತರ ಮಳೆ: ಜನಜೀವನ ಅಸ್ತವ್ಯಸ್ತ

ವಾಡಿ: ವಾಡಿ ಪಟ್ಟಣ, ನಾಲವಾರ, ಕೊಲ್ಲೂರು, ಲಾಡ್ಲಾಪುರ, ಇಂಗಳಗಿ ರಾವೂರು, ಹಲಕರ್ಟಿ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ವಾಡಿ ಪಟ್ಟಣದ ಗುರುವಾರ ಸಂತೆ ಹಾಗೂ ಶುಕ್ರವಾರದ ಲಾಡ್ಲಾಪುರ ಸಂತೆ ವೇಳೆಯಲ್ಲಿ ಮಳೆಯಿಂದ ವ್ಯಾಪಾರಿಗಳು ಮತ್ತು ವರ್ತಕರು ಸಮಸ್ಯೆ ಎದುರಿಸಿದರು. ಶಾಲಾ ಮಕ್ಕಳು ಮನೆ ಸೇರಲು ಸಮಸ್ಯೆ ತಂದಿಟ್ಟಿದೆ. ಮಳೆಯಲ್ಲಿಯೇ ಮಕ್ಕಳು ಮನೆಗೆ ತೆರಳುತ್ತಿರುವ ದೃಶ್ಯಗಳು ಕಂಡು ಬಂದವು.

ತಹಶೀಲ್ದಾರ್ ಭೇಟಿ: ಬುಧವಾರ ಸಂಜೆ ಭಾರಿ ಮಳೆಯಿಂದ ಇಂಗಳಗಿ ಗ್ರಾಮದಲ್ಲಿ ಉಡೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳ ಅವಲೋಕಿಸಿದರು. ಇನ್ನೊಂದು ಉಡೆ ಶಿಥಿಲಾವಸ್ಥೆ ತಲುಪಿದ್ದು ಅದನ್ನು ತೆರವುಗೊಳಿಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ದಂಡೋತಿ ಗ್ರಾಮದ ರಫೀಕ್ ಡೋಂಗಾ ಪುತಲೀಬೇಗಂ ಡೋಂಗಾ ಅವರ ಮನೆಗಳು ಸಂಪೂರ್ಣ ನೆಲಕ್ಕುರುಳಿವೆ. ಮನೆಯಲ್ಲಿನ ಜೀವನೋಪಯೋಗಿ ಆಹಾರ ಸಾಮಗ್ರಿ ಪಾತ್ರೆಗಳು ಹಾಳಾಗಿವೆ. ಯಾವುದೇ ಜೀವಹಾನಿಯಾಗಿಲ್ಲ.
– ನಾಗಯ್ಯ ಹಿರೇಮಠ, ಚಿತ್ತಾಪುರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.