ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮರಡ್ಡಿ ಮಲ್ಲಮ್ಮ ಜಯಂತಿ ಸಂಭ್ರಮ

Last Updated 11 ಮೇ 2022, 4:01 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಮಂಗಳವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಹಾಗೂ ತೊಟ್ಟಿಲು ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಲ್ಲೂಕು ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಶ್ರೀಮಂತ ರೆಡ್ಡಿ ಮಾತನಾಡಿ, ರಡ್ಡಿ ಜನಾಂಗದ ಕುಲದೇವತೆ ಹೇಮರಡ್ಡಿ ಮಲ್ಲಮ್ಮ. ಅವರ ಬದುಕು ಒಂದು ಮಹಾನ್‌ ಗ್ರಂಥ. ಸನ್ಯಾಸಿನಿ, ವೈರಾಗ್ಯ ತಾಳದೇ ಸಾಂಸಾರಿಕ ಜೀವನ ನಡೆಸುತ್ತ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದವರು ಎಂದು ತಿಳಿಸಿದರು.

ಹೇಮರಡ್ಡಿ ಮಲ್ಲಮ್ಮ ಪತಿವ್ರತೆ, ಆದರ್ಶ ಸೊಸೆ, ಶಿವನ ಮಹಾಭಕ್ತೆ, ಸಹನಾ ಮೂರ್ತಿ, ಕಷ್ಟದಲ್ಲಿದವರಿಗೆ ಆದರ್ಶ ಸ್ತಂಭವಾಗಿದ್ದರ. ಹೀಗಾಗಿ ಮಲ್ಲಮ್ಮ, ಅದ್ಭುತ, ಅಗೋಚರ ಶಕ್ತಿಯಾಗಿ ಇಂದಿಗೂ ನಮ್ಮೊಂದಿಗೆ ಇದ್ದಾರೆ. ಯೋಗ ಧ್ಯಾನ ಹಾಗೂ ಮಲ್ಲಿಕಾರ್ಜುನನ ಪೂಜೆಯ ಕೃಪೆಯಿಂದ ಅವಳು ಮಹಾ ಶಿವಶರಣೆಯಾಗಿ ಪರಿವರ್ತನೆಯಾದಳು. ಅಲ್ಲದೇ ಮಲ್ಲಮ್ಮ ತನ್ನ ಅತ್ತೆ ಮತ್ತು ನೆಗೆಣಿಯರು ಕೊಟ್ಟ ಕಷ್ಟವನ್ನು ಸಹಿಸಿದ್ದಳು. ಗಂಡನ ಮನೆಯಲ್ಲಿ ತನಗುಂಟಾದ ಕಷ್ಟಗಳನ್ನು ಆಕೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ತವರ ಮನೆಯವರಿಗೆ ತಿಳಿಸಲಿಲ್ಲ. ಕಾರಣ ಮಲ್ಲಮ್ಮ ಮಹಾಮಹಿಳೆ, ಅಸಾಮಾನ್ಯ ಸ್ತ್ರೀ, ಕರ್ಮಯೋಗಿಯಾಗಿದ್ದಳು ಎಂದು ಅವರು ತಿಳಿಸಿದರು.

ತೊಟ್ಟಿಲು ಕಾರ್ಯಕ್ರಮ: ರಡ್ಡಿ ಸಮಾಜದ ಮಹಿಳೆಯರು ಹೇಮರಡ್ಡಿ ಮಲ್ಲಮ್ಮರನ್ನು ತೊಟ್ಟಿಲಲ್ಲಿ ಹಾಕಿ ನಾಮಕಾರಣ ಮಾಡಿದರು. ಕಸ್ತೂರಿಬಾಯಿ ರಡ್ಡಿ, ರತ್ನಾಬಾಯಿ ರಡ್ಡಿ, ಶಾಂತಾಬಾಯಿ ರಡ್ಡಿ, ಶರಣಮ್ಮ ರಡ್ಡಿ, ಸಿದ್ದಮ್ಮ ರಡ್ಡಿ, ಜಗದೇವಿ ರಡ್ಡಿ, ರೂಪಾ ರಡ್ಡಿ, ಗಂಗಾಬಾಯಿ ರಡ್ಡಿ, ವಿಜಯಮ್ಮ ರಡ್ಡಿ, ಮಲ್ಲಮ್ಮ ರಡ್ಡಿ, ಗಿರಿಜಪ್ಪ ರಡ್ಡಿ ಮತ್ತಿತರರು ಭಾಗವಹಿಸಿದ್ದರು.

ಗ್ರಾಪಂ ಸದಸ್ಯ ರಾಜು ಹಡಪದ ಹಾಗೂ ಸಮಾಜದ ಮುಖಂಡರಾದ ಮಲ್ಲಣ್ಣ ರಡ್ಡಿ, ಭೀರಣ್ಣ ರಡ್ಡಿ, ಅಡಿವೆಪ್ಪ ರಡ್ಡಿ, ಗುಂಡಪ್ಪ ರಡ್ಡಿ, ಬಸಪ್ಪ ರಡ್ಡಿ, ಸಂಗಪ್ಪ ರಡ್ಡಿ, ಮಲ್ಲಣ್ಣ ರಡ್ಡಿ, ರಾಜಶೇಖರ ರಡ್ಡಿ, ಬಸಪ್ಪ ರಡ್ಡಿ, ಹನುಮಂತ ರಡ್ಡಿ, ಶಿವಾನಂದ ರಡ್ಡಿ, ಭೀಮಶಾ ರಡ್ಡಿ, ಸೋಮಣ್ಣ ರಡ್ಡಿ, ಚೆನ್ನಪ್ಪ ರಡ್ಡಿ ಮತ್ತಿತರರು ಇದ್ದರು.

ತಾಲ್ಲೂಕು ಆಡಳಿತದಿಂದ ಆಚರಣೆ

ಆಳಂದ: ತಾಲ್ಲೂಕು ಆಡಳಿತದಿಂದ ಮಂಗಳವಾರ ತಾಲ್ಲೂಕು ಆಡಳಿತ ಭವನದಲ್ಲಿ ಶಿವಶರಣೆ ಹೇಮ್ಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಅವರು ಹೇಮ್ಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಪ್ರಾಚಾರ್ಯ ಅಶೋಕ ರೆಡ್ಡಿ ಮಾತನಾಡಿ, ಹೇಮ್ಮರಡ್ಡಿ ಮಲ್ಲಮ್ಮ ಸುಸಂಸ್ಕೃತ ಮೌಲ್ಯಗಳನ್ನು ಸಾರಿದ ಶಿವಶರಣೆಯಾಗಿದ್ದಾರೆ. ಅವರು ಶರಣರು ಸಾರಿದ ಕಾಯಕ, ದಾಸೋಹ ತತ್ವಗಳು ನಡೆ ನುಡಿಯಲ್ಲಿ ಆಚರಣೆಗೆ ತಂದು ಆದರ್ಶವಾಗಿದ್ದಾರೆ ಎಂದು ನುಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಂಜಯ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಮೊನ್ನಮ್ಮ ಸುತಾರ, ಬಸವರಾಜ ಕಾಳೆ, ರೆಡ್ಡಿ ಸಮಾಜದ ಅಧ್ಯಕ್ಷ ಸೈಬಣ್ಣಾ ರೆಡ್ಡಿ ಮುನ್ನೋಳ್ಳಿ, ಪ್ರಮುಖರಾದ ನಾಗೇಂದ್ರಪ್ಪ ರೆಡ್ಡಿ, ಶರಣಗೌಡ ಪಾಟೀಲ, ರಮೇಶ ರೆಡ್ಡಿ, ಅನಂತಗಿರಿ ಪಾಟೀಲ, ಪುಂಡಲಿಕ ರೆಡ್ಡಿ, ಮಲ್ಲಿನಾಥ ರೆಡ್ಡಿ, ಶಿವಪ್ರಕಾಶ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಆನಂದ ಪೂಜಾರಿ, ಪ್ರಭಾಕರ ಹೆಬಳಿ ಇದ್ದರು.
ತಾಲ್ಲೂಕಿನ ಎಲೆ ನಾವದಗಿ, ಬಾಳಿ, ಕಡಗಂಚಿ, ಮುನ್ನೋಳ್ಳಿ ಗ್ರಾಮಗಳಲ್ಲಿಯೂ ಹೇಮ್ಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT