ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಸಂಪರ್ಕ, ಏಕತೆ ಮೂಡಿಸುವ ಭಾಷೆ: ಸುಧೀರ ಕುಮಾರ ಶರ್ಮಾ

Last Updated 1 ಅಕ್ಟೋಬರ್ 2021, 4:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹಿಂದಿ ಭಾಷೆ ಬಹಳ ಸರಳ ಸಂಪರ್ಕ ಹಾಗೂ ಭಾರತದ ಏಕತೆ ಮೂಡಿಸುವ ಭಾಷೆಯಾಗಿದೆ. ಇದರ ಪ್ರಯೋಗ ಮತ್ತು ಸರಳವಾಗಿ ಕಲಿಯಲಾಗುತ್ತದೆ. ನಮ್ಮ ದೇಶ ವಿವಿಧ ರಾಜ್ಯ, ಭಾಷೆ, ಧರ್ಮ, ಆಚರಣೆಗಳಿಂದ ಕೂಡಿದ್ದು ಅವುಗಳನ್ನು ಒಂದೆಡೆ ಜೋಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಪರ್ಕ ಭಾಷಾಧಿಕಾರಿಸುಧೀರ ಕುಮಾರ ಶರ್ಮಾ ಅಭಿಪ್ರಾಯಪಟ್ಟರು.

ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಕ್ರಾಸ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಹಿಂದಿ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಸ್ಸೆನ್ನೆಲ್ ರಾಜಭಾಷಾಧಿಕಾರಿ ಡಾ. ಹೀರಾಸಿಂಗ ರಾಠೋಡ ಮಾತನಾಡಿ, ಹಿಂದಿ ಭಾಷೆ ನಮ್ಮೆಲ್ಲರ ಮಧ್ಯೆ ಪ್ರೀತಿ ಗೌರವ ಹೆಚ್ಚಿಸುವ ಭಾಷೆಯಾಗಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಭಾಷೆಯಾಗಿದೆ ಎಂದರು.

ಡಾ. ಶಾಂತಾ ಅಷ್ಠಗಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಜೈಕಿಷನ ಠಾಕೂರ ಮಾತನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥ ದಯಾನಂದ ಸುರವಸೆ ಸ್ವಾಗತಿಸಿದರು. ಡಾ. ಮೊಹಮ್ಮದ್ ಯೂನುಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಭಾರತಿ ಬುಸಾರೆ, ಡಾ. ರಾಬಿಯಾ ಇಪ್ಪತ್ ಅತಿಥಿಗಳ ಪರಿಚಯ ಮಾಡಿದರು.

‌ಡಾ. ರವಿಂದ್ರಕುಮಾರ ಭಂಡಾರಿ ವಂಧಿಸಿದರು. ಡಾ. ಶಶಿಕಾಂತ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಪ್ರಾಧ್ಯಾಪಕರಾದ ಪ್ರೊ. ಶಂಕರ ಗಣಗೊಂಡ, ಪ್ರೊ. ಅಣ್ಣಾರಾಯ ಪಾಟೀಲ, ಪ್ರೊ. ಸತ್ತೇಶ್ವರ ಚೌದರೆ, ಪ್ರೊ. ಸುಜಾತಾ ದೊಡಮನಿ, ಪ್ರೊ. ಶಿವಕುಮಾರ, ಡಾ. ಭೀಮಣ್ಣಾ ಎಚ್ಇ ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT