ಕಲಬುರ್ಗಿ: ಭೀಮೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಚಿತ್ತಾಪುರ ತಾಲ್ಲೂಕಿನ ಸನ್ನತಿ ಬಳಿ ಭೀಮಾ ನದಿಯ ದಡದಲ್ಲಿರುವ ಕನಗನಹಳ್ಳಿಯ ಐತಿಹಾಸಿಕ ಬೌದ್ಧ ಸ್ತೂಪ ಹಾಗೂ ಚಂದ್ರಲಾ ಪರಮೇಶ್ವರಿ ದೇವಾಲಯ ಸಂಪೂರ್ಣ ಜಲಾವೃತಗೊಂಡಿವೆ.

ಭೀಮಾ ಬ್ಯಾರೇಜ್ನ ಎಲ್ಲಾ ಗೇಟ್ಗಳ ಮೂಲಕ ನೀರು ಹೊರ ಬಿಡಲಾಗುತ್ತಿದ್ದು, ಪ್ರವಾಹ ಇನ್ನೂ ಉಕ್ಕೇರುತ್ತಲೇ ಇದೆ. ಕ್ರಿ.ಪೂ. 3ನೇ ಸತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನ ಕಾಲದ ಬೌದ್ಧ ಚರಿತ್ರೆ ಸಾರುವ ಸಾವಿರಾರು ಬೌದ್ಧ ಶಿಲ್ಪಕಲೆಗಳು, ಬುದ್ಧ ವಿಹಾರ, ಬುದ್ಧನ ಮೂರ್ತಿಗಳು, ಪಾಲಿ ಭಾಷೆಯ ಶಿಲಾ ಶಾಸನ ಹೀಗೆ ಸಾವಿರಾರು ಬೌದ್ಧ ಕುರುಹುಗಳಿಗೆ ಪ್ರವಾಹದ ಬಿಸಿ ತಟ್ಟಿದೆ.

ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಈ ಬೌದ್ಧ ನೆಲೆ ಈಗ ಜಲಪ್ರವಾಹಕ್ಕೆ ಸಿಲುಕಿದೆ.

ಶುಕ್ರವಾರ ಬೆಳಿಗ್ಗೆ 8ರಿಂದ ಪ್ರವಾಹ ಗಂಭೀರ ಪರಿಸ್ಥಿತಿ ತಲುಪಿದೆ. ಏಕಾಏಕಿ ಪ್ರವಾಹ ಉಂಟಾಗಿ ಬೌದ್ಧ ಸ್ತೂಪ ತಾಣವೀಗನೀರಲ್ಲಿ ನಿಂತಿದೆ. ಸನ್ನತಿ ಗ್ರಾಮ ಮತ್ತು ಬೌದ್ಧ ಸ್ತೂಪ ಸ್ಥಳದ ಜತೆಗೆ ಶ್ರೀಚಂದ್ರಲಾ ಪರಮೇಶ್ವರಿ ದೇವಸ್ಥಾನ ಮುಳುಗಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.