ಬುಧವಾರ, ಆಗಸ್ಟ್ 10, 2022
24 °C

ಹಿರಿಯ ವೈದ್ಯಾಧಿಕಾರಿಗಳ ಭರ್ತಿಯಲ್ಲಿ ಅನ್ಯಾಯ: ನಮೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಹಿರಿಯ ವೈದ್ಯಾಧಿಕಾರಿ, ತಂತ್ರಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಮತ್ತು ದಂತ ವೈದ್ಯಾಧಿಕಾರಿಗಳ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ 10-09-2020ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಕಲ್ಯಾಣ ಕರ್ನಾಟಕ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳು 151, ಹೈದರಾಬಾದ್‌ ಕರ್ನಾಟಕೇತರ 1,095 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.

ವೈದ್ಯಾಧಿಕಾರಿಗಳ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 3–4–2021 ರಂದು ಪ್ರಕಟಿಸಲಾಗಿದೆ. 371 (ಜೆ) ಸೌಲಭ್ಯ ಪಡೆಯಲು ಬಯಸಿದರೆ 15 ದಿನಗಳ ಒಳಗಾಗಿ ಇಚ್ಛಾಪತ್ರವನ್ನು ಸಲ್ಲಿಸಬೇಕು ಎಂದು ಸೂಚಿಸಿದ್ದರು.  ಅದರಲ್ಲಿ ಅನೇಕ ಅಭ್ಯರ್ಥಿಗಳು ಇಚ್ಛಾಪತ್ರವನ್ನು ಸಲ್ಲಿಸಿರುತ್ತಾರೆ. 12-05-2021 ರಂದು ಅಂತಿಮ ಆಯ್ಕೆ ಪಟ್ಟಿ  ಪ್ರಕಟಿಸಲಾಗಿದ್ದು, ಒಟ್ಟು 35 ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ಹೆಸರನ್ನು ಅಂತಿಮ ಆಯ್ಕೆಪಟ್ಟಿಯಿಂದ ಕೈಬಿಟ್ಟಿರುತ್ತಾರೆ ಎಂದು ನಮೋಶಿ ಆಕ್ಷೇಪಿಸಿದ್ದಾರೆ.

ಪಿಯು ಉಪನ್ಯಾಸಕರ ನೇಮಕಾತಿಯಲ್ಲಿಯೂ ಇದೇ ತರದ ತಪ್ಪಾಗಿತ್ತು. ನ್ಯಾಯಾಲಯದ ಸೂಚನೆಯ ನಂತರ ಅನ್ಯಾಯ ಸರಿಪಡಿಸಲಾಯಿತು. ಮುಖ್ಯಮಂತ್ರಿ  ಹಾಗೂ ಆರೋಗ್ಯ ಸಚಿವರು ಈ ಅನ್ಯಾಯ ಸರಿಪಡಿಸಬೇಕು ಎಂದು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು