ಶುಕ್ರವಾರ, ಮೇ 27, 2022
21 °C

ಬಸವೇಶ್ವರ, ಹೇಮರಡ್ಡಿ ಮಲ್ಲಮ್ಮ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ‘ವಿಶ್ವಗುರು ಬಸವೇಶ್ವರ ಹಾಗೂ ಮಹಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿಯನ್ನು ಲಿಂಗಾಯತ ಹಾಗೂ ರಡ್ಡಿ ಸಮಾಜ ಬಾಂಧವರು ಕೂಡಿಕೊಂಡು ಆಚರಿಸಿದ್ದು ಅರ್ಥಪೂರ್ಣ ಹಾಗೂ ಮಾದರಿ ಕಾರ್ಯ’ ಎಂದು ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ನಾಗಾಈದಲಾಯಿ ಗ್ರಾಮದಲ್ಲಿ ಮಂಗಳವಾರ ನಡೆದ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.‌

ಮಹಾಪುರುಷರ ಜಯಂತಿ ಜಾತಿ, ಸಮುದಾಯಗಳಿಗೆ ಸೀಮಿತವಾಗುತ್ತಿರುವ ಕಾಲಘಟ್ಟದಲ್ಲಿ ಎರಡೂ ಪ್ರಬಲ ಸಮುದಾಯಗಳು ಒಂದುಗೂಡಿ ಜಯಂತ್ಯುತ್ಸವ ನಡೆಸಿದ್ದು ಶ್ಲಾಘನೀಯ ಕಾರ್ಯ. ಇದನ್ನು ಬೇರೆ ಗ್ರಾಮಗಳ ಗ್ರಾಮಸ್ಥರು ಅನುಸರಿಸುವುದು ಸೂಕ್ತ ಎಂದರು.

ಪ್ರತಿಯೊಬ್ಬರೂ ಮಹಾ ಮಾನವತಾವಾದಿ ಬಸವಣ್ಣ ಹಾಗೂ ಮಹಾಸಾಧ್ವಿ ಹೇಮರಡ್ಡಿ‌ ಮಲ್ಲಮ್ಮನವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಅಖಿಲ ಭಾರರ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಚಿತ್ರಶೇಖರ ಪಾಟೀಲ, ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ, ಕಾಂಗ್ರೆಸ್ ಮುಖಂಡ ಚಿಂತನ ಶುಭಾಷ ರಾಠೋಡ, ಮಲ್ಲಿಕಾರ್ಜುನ ಪಾಲಾಮೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ‌ ಮಾಲಿ ಹಾಗೂ ಹಿರಿಯ ಶರಣ ಅಣ್ಣಾರಾವ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಕಾಂಗ್ರೆಸ್ ವಕ್ತಾರ ಶರಣು ಪಾಟೀಲ‌ ಮೋತಕಪಳ್ಳಿ, ನೀಲಕಂಠ ಸೀಳಿನ್, ನಾಗರಾಜ ಮಲಕೂಡ, ಸಂಜೀವಕುಮಾರ, ನಾಗೇಶ ಗುಣಾಜಿ, ರಾಹುಲ್, ಸಯ್ಯದ್ ನಿಯಾಜ ಅಲಿ, ತಿಪ್ಪರೆಡ್ಡಿ ಬಂಟ್ವಾರ, ವಿಶ್ವನಾಥ್ ಪಾಟೀಲ, ಶಿವರಾಜ ಸಿಂದೊಲ, ಉದಯ ಪಾಟೀಲ, ಉದಯ್ ಸಿಂದೊಲ, ಸಂಗಾರೆಡ್ಡಿ ಅನಂತ ರೆಡ್ಡಿ, ಸಂಗಮೇಶ ಪಾಟೀಲ, ಚಂದ್ರಶೇಖರ ಸೂಗೂರು, ಆಕಾಶ ಪಾಟೀಲ, ವೀರಶೆಟ್ಟಿ ಪಾಟೀಲ, ಚಿತ್ರಶೇಖರ ಮೀನಕೇರಾ, ಪ್ರವೀಣ್ ರೆಡ್ಡಿ, ಸಂದೀಪ್ ಪಾಟೀಲ, ಸುನಿಲ್ ಹಳ್ಳಿ, ಶಿವರಾಜ ಮೀನಾಕೆರ, ಶಂಕ್ರಯ್ಯ ಸ್ವಾಮಿ, ರಾಜು ಮುರುಡ, ಧನರಾಜ್ ಪಾಟೀಲ, ರಜಿನಿಕಾಂತ ಹಾಗೂ ನೆಲ್ಲಿ‌ ಮಲ್ಲಿಕಾರ್ಜುನ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.