ಸೋಮವಾರ, ಮೇ 23, 2022
30 °C
ಕೇಂದ್ರ, ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಆಕ್ರೋಶ

ಕಲಬುರಗಿ | ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ: ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ನಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದಲ್ಲಿ ನಡೆದ ಮೆರವಣಿಗೆಯು ಕಲಬುರಗಿ ವೃತ್ತ, ಮುಖ್ಯರಸ್ತೆ ಸೇರಿದಂತೆ ವಿವಿಧೆಡೆ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿ ತಲುಪಿತು.

ಸಿಲಿಂಡರ್, ಪೆಟ್ರೋಲ್, ದಿನಸಿ ವಸ್ತು ಚಿತ್ರಗಳ ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಬೆಲೆ ಏರಿಕೆ ಕ್ರಮವನ್ನು ಕೂಡಲೇ ಹಿಂಪಡೆಯಬೇಕು. ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕೂಡಲೇ ‌ಕ್ರಮ ಜರುಗಿಸಬೇಕು’ ಎಂದರು.

ಜೆಡಿಎಸ್‌ ಮುಖಂಡ ಬಾಲರಾಜ್ ಗುತ್ತೇದಾರ ಮಾತನಾಡಿ, ‘ಅಗತ್ಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಪರಿಸ್ಥಿತಿ ದುಸ್ತರವಾಗಿದೆ. ರೈತನ ಶ್ರಮಕ್ಕೆ ತಕ್ಕ ಪ್ರತಿಫಲ ಎಲ್ಲಿಯೂ ಸಿಗುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರವು ಜನರ ನೆರವಿಗೆ ಮುಂದಾಗುತ್ತಿಲ್ಲ’ ಎಂದು ಅವರು ತಿಳಿಸಿದರು.

ಮುಖಂಡರಾದ ಬಸವರಾಜ್ ಬಿರಬಿಟ್ಟೆ, ಕಟ್ಟಿ ಸಂಗಾವಿ, ಆರ್.ಆರ್.ಪಾಟೀಲ್, ಎಕ್ಬಾಲ್,ಶಿವರಾಮ ರೆಡ್ಡಿ ಮುದೋಳ, ಜಗನ್ನಾಥರೆಡ್ಡಿ ಗೊಟುರ, ಮಲ್ಲಿಕಾರ್ಜುನ್ ಮುತ್ಯಾಲ, ಹಸನಪ್ಪ ಮೇತ್ರೆ, ಚಾಂದಪಾಷಾ, ಪ್ರವೀಣ್ ಕೇರಿ, ಬಸವರಾಜ ತಳವಾರ, ವಿಜಯಕುಮಾರ ಕುಲಕರ್ಣಿ, ಶಿವಪುತ್ರ ಮೊಘ, ಯಷವಂತ ಹಲಚೆರಾ, ಸುರೇಶ ಬಂಡೆ, ಸಿದ್ದಯ್ಯ ಸ್ವಾಮಿ, ಖಾಸಿಂ ಅಲಿ ಯಾನಗುಂದಿ, ಪುಷ್ಪವತಿ ಗೊಬ್ಬುರ್, ಮಹಾದೇವಿ ಹಲಕರ್ಟಿ, ಕನಿಜ್ ಫಾತಿಮ, ರೆಹಮತ ಬೇಗಮ್, ರಾಜಶ್ರೀ ಕೊರವಿ, ಬಿಸಮಿಲ್ಲಾ ಬೇಗಮ್, ಹಣಮಂತ ರೆಡ್ಡಿ ಚಂದಾಪುರ, ಶಿವಶಂಕ್ರಯ್ಯಸ್ವಾಮಿ ,ಭಾಗೇಶ್ ಗೊಬ್ಬುರ್, ಸಂತೋಷ್ ಬೂತಪುರ, ಹನಮಯ್ಯ ಗುತ್ತೇದಾರ, ಭೀಮರೆಡ್ಡಿ ಹಂದರಕಿ, ಭೀಮರೆಡ್ಡಿ ಗೌಡನಹಳ್ಳಿ, ಶಂಭುಲಿಂಗ ನಾಟಿಕರ್, ದೇವು ಭಂಡಾರಿ, ರಾಘವೇಂದ್ರ ಕೊಟ್ರಕಿ, ಶಿವಕುಮಾರ್ ಜಾಡರ, ಮನೋಜ್ ಕುಮಾರ್, ರವಿ, ಕೃಷ್ಣಪ್ಪ ಕುರಕುಂಟಾ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.