ಮಂಗಳವಾರ, ಡಿಸೆಂಬರ್ 1, 2020
17 °C

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕು ಜಾತ್ಯತೀತ ಜನತಾ ದಳದ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಚಿಂಚೋಳಿ– ಕಲಬುರ್ಗಿ ಮಾರ್ಗದ ನೀಮಾ ಹೊಸಳ್ಳಿ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮಾಣಿಕ್ ಘತ್ತರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಅತಿವೃಷ್ಟಿಯಿಂದ ದೇಗಲಮಡಿ ಕ್ರಾಸ್, ದೇಗಲಮಡಿ, ನಿಮಾ ಹೊಸಳ್ಳಿ ಚಿಂಚೋಳಿ ಮಾರ್ಗದ ರಸ್ತೆ, ಐನೋಳ್ಳಿ ಕ್ರಾಸ್ ಚಂದ್ರಂಪಳ್ಳಿ, ಕೊಳ್ಳೂರು ರಸ್ತೆ ಹಾಗೂ ಸಾಲೇಬೀರನಹಳ್ಳಿ ಮರಪಳ್ಳಿ, ಗಾರಂಪಳ್ಳಿ ರಸ್ತೆ ಹಾಳಾಗಿದ್ದು ಪ್ರವಾಹ ಹಾನಿ ನಿಧಿಯಿಂದ ರಸ್ತೆ ಸುಧಾರಣೆ ಕೈಗೊಳ್ಳಬೇಕು.  ಕೆಳದಂಡೆ ಮುಲ್ಲಾಮಾರಿ ಯೋಜನೆಯ ವೇಸ್ಟೆವೇಯರ್ ಎದುರಿನ ಬೆಡ್ ಕಿತ್ತು ಹೋಗಲು ಕಳಪೆ ಕಾಮಗಾರಿ ಕಾರಣವಾಗಿದೆ. ಇದನ್ನು ನಿರ್ಮಿಸಿದ ಗುತ್ತಿಗೆದಾರನಿಂದಲೇ ಮರು ನಿರ್ಮಿಸಬೇಕು, ಚಂದನಕೇರಾದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ ರೈತನ ಕುಟುಂಬಕ್ಕೆ ಪರಿಹಾರ ವಿತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಪತ್ರದಲ್ಲಿ ಆಗ್ರಹಪಡಿಸಲಾಗಿದೆ.

ಪ್ರತಿಭಟನೆಯಲ್ಲಿ ಮಾಜೀದ್ ಪಟೇಲ್, ಸಿದ್ದಯ್ಯ ಸ್ವಾಮಿ ಕಪೂರ, ಓಮನರಾವ್ ಕೊರವಿ, ಹಣಮಂತ ಪೂಜಾರಿ, ಎಸ್.ಕೆ ಮುಕ್ತಾರ್, ಮಂಜೂರು ಅಹಮದ್, ಬಸವರಾಜ ವಾಡಿ ಇದ್ದರು.

ಗ್ರೇಡ್-2 ತಹಶೀಲ್ದಾರ್‌ ಮಾಣಿಕ ಘತ್ತರಗಿ ಮನವಿ ಸ್ವೀಕರಿಸಿದರು. ಕೆಳದಂಡೆ ಮುಲ್ಲಾಮಾರಿ ಯೋಜನೆಯ ಎಇಇ ಹಣಮಂತರಾವ್ ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಶರಣಪ್ಪ ಕೇಶ್ವಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.