ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸನ್ಯಾಸಿಯಾಗುತ್ತಾರೆ: ಸವದಿ

Published 2 ಮೇ 2024, 15:18 IST
Last Updated 2 ಮೇ 2024, 15:18 IST
ಅಕ್ಷರ ಗಾತ್ರ

ಜೇವರ್ಗಿ: ‘ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಿದರಿಂದ ದೇಶ ಮುನ್ನಡೆಸಲು ಆಗುವುದಿಲ್ಲ. ಮೋದಿ ಸನ್ಮಾಸಿ ಆಗುತ್ತಾರೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ರಾಧಾಕೃಷ್ಣ ದೊಡ್ಡಮನಿ ಅವರ ಪರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮೋದಿ ಅವರ ಮುಖ ನೋಡಿ ಯಾರು ಕೂಡ ಮತ ನೀಡಬಾರದು. ಜೇವರ್ಗಿ ಕ್ಷೇತ್ರವನ್ನು ಡಾ.ಅಜಯಸಿಂಗ್ ಅಭಿವೃದ್ಧಿ ಮಾಡುತ್ತಾರೆ ಹೊರತು ಮೋದಿ ಬಂದು ಅಭಿವೃದ್ದಿ ಮಾಡುವುದಿಲ್ಲ. ಜೇವರ್ಗಿ ತಾಲ್ಲೂಕಿನಲ್ಲಿ ಗಾಣಿಗ ಸಮಾಜದವರು ಒಗ್ಗಟ್ಟಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಆವಾಗ ನಮ್ಮ ಸಮಾಜಕ್ಕೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ. ಅದಕ್ಕಾಗಿ ರಾಧಾಕೃಷಣ ಅವರನ್ನು ಗೆಲ್ಲಿಸಿ’ ಎಂದು ಕೋರಿದರು. 

ಶಾಸಕ ಡಾ.ಅಜಯಸಿಂಗ್ ಮಾತನಾಡಿ, ‘ಗಾಣಿಗ ಸಮಾಜದವರು ಧರಂಸಿಂಗ್ ಅವರನ್ನು 8 ಬಾರಿ, ನನ್ನನ್ನು 3 ಬಾರು ಶಾಸಕನಾಗಿ ಗೆಲ್ಲಿಸಿದ್ದಾರೆ. ನಮ್ಮ ಕುಟುಂಬ ನಿಮ್ಮ ಋಣದಲ್ಲಿದ್ದೇವೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಮಡಿವಾಳಪ್ಪಗೌಡ ಮಾಗಣಗೇರಿ, ಅಪ್ಪಾರಾವ ಪಾಟೀಲ ಅತನೂರ, ಶಿವಾನಂದ ದ್ಯಾಮಗೊಂಡ, ಮಲ್ಲಿಕಾರ್ಜುನ ನವಣಿ, ಕಾಶಿರಾಯಗೌಡ ಯಲಗೋಡ, ಸಿದ್ದಲಿಂಗರಡ್ಡಿ ಇಟಗಿ, ರುಕುಂಪಟೇಲ ಇಜೇರಿ, ಶಿವಪುತ್ರಪ್ಪ ಸಾಹು ಕೋರಿ, ಮಲ್ಲಣ್ಣಗೌಡ ನೇದಲಗಿ, ಶರಣು ಬಿಲ್ಲಾಡ, ಗೌಡಪ್ಪಗೌಡ ಬಿರೆದಾರ ಕೋಣಸಿರಸಗಿ, ಸಿದ್ದು ಯಂಕಚಿ, ವಿಜಯಕುಮಾರ ಹಿರೇಮಠ, ವಿಜಯಕುಮಾರ ಪಾಟೀಲ ಕಲ್ಲಹಂಗರಗಿ, ಶರಣಬಸಪ್ಪ ಜೋಗುರ, ಬಸವಂತ್ರಾಯಗೌಡ ಸಾಹುಕಾರ, ಸಿದ್ರಾಮಪ್ಪಗೌಡ ಕಲ್ಲೂರ ಕೆ, ಮಲ್ಲಿಕಾರ್ಜುನ ಬೂದಿಹಾಳ, ಶಾಂತಪ್ಪ ಕೂಡಲಗಿ, ವಸಂತ ನರಿಬೋಳ, ಅಬ್ದುಲ ರೆಹೆಮಾನ ಪಟೇಲ, ಅಂಜಲಿ ಮಾವನೂರ, ಬಹದ್ದೂರ ರಾಠೋಡ, ಅಪ್ಪಾಸಾಬ ಹೊಸಮನಿ, ಮರೆಪ್ಪ ಸರಡಗಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT