ಕಲಬುರಗಿ: ನಗರ ವಾಸಿಗಳ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಗುರಿಯೊಂದಿಗೆ ಆರಂಭವಾಗಿದ್ದ 24x7 ನೀರು ಪೂರೈಕೆ ಯೋಜನೆ ಕಾಮಗಾರಿ ನಿಗದಿತ ಗಡುವು ಮುಗಿದು ಎರಡು ತಿಂಗಳಾದರೂ ಶೇ50ರಷ್ಟೂ ಪೂರ್ಣಗೊಂಡಿಲ್ಲ.

ವಿಶ್ವ ಬ್ಯಾಂಕ್ ನೆರವಿನೊಂದಿಗೆ ‘ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ’ಯಡಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು 2025ರ ಜೂನ್ 9ಕ್ಕೆ ಮುಗಿಯಬೇಕಿತ್ತು. ಆದರೆ, 2025ರ ಆಗಸ್ಟ್ 26ರ ತನಕ ಒಟ್ಟಾರೆ ಶೇ44ರಷ್ಟು ಮಾತ್ರ ಗುರಿ ಸಾಧಿಸಿದೆ.

₹837.43 ಕೋಟಿ ವೆಚ್ಚದ ಯೋಜನೆಯ ಕಾಮಗಾರಿಯನ್ನು ಚೆನ್ನೈನ ಎಲ್ ಆ್ಯಂಡ್ ಟಿ ನಿರ್ಮಾಣ ಕಂಪನಿ ಗುತ್ತಿಗೆ ಪಡೆದಿದೆ. ಯೋಜನೆಯು ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಹಾಗೂ ಹಸ್ತಾಂತರ ಮಾದರಿಯಲ್ಲಿ ಅನುಷ್ಠಾನಗೊಳ್ಳಬೇಕಿದೆ. ಐದು ವರ್ಷದಲ್ಲಿ ಎಲ್ಲ ಕಾಮಗಾರಿ ಮುಗಿಸಬೇಕಿತ್ತು. ಜೊತೆಗೆ ಮುಂದಿನ ಏಳು ವರ್ಷಗಳ ಅವಧಿಗೆ ನಿರ್ವಹಣೆ ಮಾಡಿ ಬಳಿಕ ಪಾಲಿಕೆಗೆ ಹಸ್ತಾಂತರಿಸಬೇಕಿದೆ. ದಾಖಲೆಗಳ ಪ್ರಕಾರ 2020ರ ಜೂನ್ನಲ್ಲಿ ಗುತ್ತಿಗೆ ಕರಾರು ನಡೆದಿದ್ದು, ನಗರದ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆಯನ್ನು 2021ರ ಜುಲೈನಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ ಹಸ್ತಾಂತರಿಸಲಾಗಿದೆ.

ಕಾಮಗಾರಿ ಏನೇನು?

ಬೆಣ್ಣೆತೊರಾ ಜಲಾಶಯದ ಬಳಿ ಜಾಕ್ವೆಲ್ ನಿರ್ಮಾಣ, ಅಲ್ಲಿಂದ ಸಲಾಂ ತೇಕಡಿ ತನಕ ಕಚ್ಚಾ ನೀರು ಪೂರೈಸುವ 13.59 ಕಿ.ಮೀ ಉದ್ದದ ಪೈಪ್ಲೈನ್ ಹಾಕುವುದು, ಸಲಾಂ ತೇಕಡಿಯಲ್ಲಿ 58.77 ಎಂಎಲ್ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣ, 17.15 ಕಿ.ಮೀ ಉದ್ದ ಶುದ್ಧ ನೀರು ಪೂರೈಕೆ ಕಾಮಗಾರಿ, ನಗರದಲ್ಲಿ 12 ಮೇಲ್ಮಟ್ಟದ ಬೃಹತ್ ಜಲಸಂಗ್ರಹಾಗಾರಗಳು, ಒಂದು ನೆಲಮಟ್ಟದ ಬೃಹತ್ ಜಲಸಂಗ್ರಹಾಗಾರ, ನಗರದಲ್ಲಿ ನೀರು ಪೂರೈಕೆಗೆ 899 ಕಿ.ಮೀ ಪೈಪ್ಲೈನ್ ಅಳವಡಿಕೆ, 62,767 ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ಉದ್ದೇಶಿತ ಯೋಜನೆಯಡಿ ಎಲ್ ಆ್ಯಂಡ್ ಟಿ ಮಾಡಬೇಕಿದೆ.

ಈವರೆಗೂ ಆಗಿದ್ದೆಷ್ಟು?

ಉದ್ದೇಶಿತ ಕಾಮಗಾರಿಯಲ್ಲಿ ಬೆಣ್ಣೆತೊರಾ ಜಲಾಶಯದ ಬಳಿಯ ಜಾಕ್ವೆಲ್ ನಿರ್ಮಾಣಕ್ಕೆ ಈಗಷ್ಟೇ ಅಗೆತ ಮುಗಿಸಿ ಬೆಡ್ ಹಾಕಲಾಗಿದ್ದು, ಬಹುತೇಕ ಶೇ10ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಈ ಜಾಕ್ವೆಲ್ ನಿರ್ಮಾಣಕ್ಕೆ ಕನಿಷ್ಠ ಒಂದು ವರ್ಷವಾದರೂ ಹಿಡಿಯಲಿದೆ ಎಂದು ಅಧಿಕಾರಿಗಳ ಅಂಬೋಣ.

ಇನ್ನು, 13.59 ಕಿ.ಮೀ ಕಚ್ಚಾ ನೀರು ಪೂರೈಸುವ ಪೈಪ್ಲೈನ್ನಲ್ಲಿ 12.82 ಕಿ.ಮೀ ಕಾಮಗಾರಿ ಮುಗಿದಿದ್ದು, ಇನ್ನೂ 700 ಮೀಟರ್ಗಳಷ್ಟು ಕಾಮಗಾರಿ ಬಾಕಿ ಇದೆ. ಶುದ್ಧ ನೀರು ಪೂರೈಸುವ 17.15 ಕಿ.ಮೀ ಪೈಪ್ಲೈನ್ ಕಾಮಗಾರಿಯಲ್ಲಿ 32.37 ಕಿ.ಮೀ ಕೆಲಸ ಮುಗಿದಿದ್ದು, 3.18 ಕಿ.ಮೀ ಬಾಕಿ ಉಳಿದಿದೆ. 12 ಮೇಲ್ಮಟ್ಟದ ಜಲಸಂಗ್ರಹಾಗಾರಗಳ ಪೈಕಿ ಟ್ಯಾಂಕ್ಗಳ ಸಿವಿಲ್ ಕೆಲಸ ಮುಗಿದಿದೆ. ಇನ್ನುಳಿದ ಏಳು ಟ್ಯಾಂಕ್ಗಳ ಪೈಕಿ 3 ಟ್ಯಾಂಕ್ಗಳ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನುಳಿದ 4 ಟ್ಯಾಂಕ್ಗಳ ಕೆಲಸ ಬರೀ ಶೇ30ರಷ್ಟಾಗಿದ್ದು, ಮಿಕ್ಕ ಶೇ70ರಷ್ಟು ಕೆಲಸ ಬಾಕಿ ಇದೆ.

ನೆಲಮಟ್ಟದ ಜಲಸಂಗ್ರಹಾಗಾರ ಕಟ್ಟಡ ತಲೆಎತ್ತಿದ್ದು, ಹೈಡ್ರೋ ಟೆಸ್ಟ್ ಮಾತ್ರವೇ ಮುಗಿದಿದೆ. ಇನ್ನುಳಿದ ಕೆಲಸ ಬಾಕಿಯಿದೆ. ಇನ್ನು, ನಗರದಲ್ಲಿ ನೀರು ಪೂರೈಸುವ 899 ಕಿ.ಮೀ ಪೈಪ್ಲೈನ್ ಪೈಕಿ 427 ಕಿ.ಮೀ ಕಾಮಗಾರಿಯಷ್ಟೇ ಮುಗಿದಿದ್ದು, ಇನ್ನುಳಿದ 472 ಕಿ.ಮೀ ಕಾಮಗಾರಿ ಬಾಕಿಯಿದೆ. ಉದ್ದೇಶಿಶಿತ 62,767 ಮನೆಗಳ ಪೈಕಿ, 14,193 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ.

‘ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆ ಅಗೆದು ಬಿಟ್ಟಿರುವ ಪೈಪ್ಲೈನ್ ಹಾಕುತ್ತಿರುವ ಎಲ್ ಆ್ಯಂಡ್ ಟಿ ಕಂಪನಿಯು ಐದು ವರ್ಷಗಳಲ್ಲಿ ಅರ್ಧದಷ್ಟೂ ಕಾಮಗಾರಿ ಮುಗಿಸಿಲ್ಲ. ಸಂಪೂರ್ಣ ಕಾಮಗಾರಿ ಮುಗಿಸಲು ಇನ್ನೆಷ್ಟು ವರ್ಷ ಹಿಡಿಯಲಿದೆಯೋ ಏನೋ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ನಿರಂತರ ನೀರು ಪೂರೈಕೆ ಯೋಜನೆ ಕಾಮಗಾರಿಯ ವೇಗ ಸದ್ಯ ಸಮಾಧಾನಕರ ಮಟ್ಟಕ್ಕೆ ತಲುಪಿದ್ದು ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲಿಸಲಾಗುತ್ತಿದೆ.
– ಅವಿನಾಶ ಶಿಂದೆ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ

‘15 ದಿನಗಳಲ್ಲಿ 3500 ಮನೆಗೆ 24x7 ನೀರು’

‘ನಗರದ ಓಜಾ ಬಡಾವಣೆ ಐವಾನ್–ಎ–ಶಾಹಿ ಪ್ರದೇಶ ಕರುಣೇಶ್ವರ ನಗರ ರೋಜಾ–ಕೆ ತಾರಫೈಲ್ ಸೇರಿದಂತೆ ವಿವಿಧೆಡೆಯ 3500ಕ್ಕೂ ಹೆಚ್ಚು ಮನೆಗಳಿಗೆ 24x7 ನೀರು ಪೂರೈಕೆ ಯೋಜನೆಯಡಿ ಮುಂದಿನ 15 ದಿನಗಳಲ್ಲಿ ನೀರು ಪೂರೈಕೆಯಾಗಲಿದೆ. ಈ ಪೈಕಿ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ನಡೆಯುತ್ತಿದೆ’ ಎನ್ನುತ್ತಾರೆ ಕೆಯುಐಡಿಎಫ್ಸಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಆರ್.ಪಿ.ಜಾಧವ.

ನೂರಾರು ನೋಟಿಸ್ ₹ 27 ಕೋಟಿ ದಂಡ

24x7 ನೀರು ಪೂರೈಕೆ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ನೀರು ಪೂರೈಕೆಯಲ್ಲಿ ಲೋಪ ಕಳಪೆ ಪೈಪ್ಗಳಂಥ ಹಲವು ಕಾರಣಗಳಿಗೆ ಎಲ್ ಆ್ಯಂಡ್ ಟಿ ಕಂಪನಿಗೆ ಪಾಲಿಕೆಯಿಂದ ಈತನಕ 250ಕ್ಕೂ ಅಧಿಕ ನೋಟಿಸ್ ನೀಡಲಾಗಿದ್ದು ₹27 ಕೋಟಿಗಳಿಗೂ ಅಧಿಕ ದಂಡವನ್ನು ವಿಧಿಸಲಾಗಿದೆ. ಅವಧಿ ವಿಸ್ತರಣೆಗೆ ಪ್ರಸ್ತಾವ ‘ಕಾಮಗಾರಿ ವಿಳಂಬದ ಬೆನ್ನಲ್ಲೇ ಯೋಜನೆ ಪೂರ್ಣಗೊಳಿಸಲು 2026ರ ಸೆಪ್ಟೆಂಬರ್ ತನಕ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಎಲ್ ಆ್ಯಂಡ್ ಟಿ ನಿರ್ಮಾಣ ಕಂಪನಿ ಪ್ರಸ್ತಾವ ಸಲ್ಲಿಸಿದೆ. ಆದರೆ ಈ ಬಗೆಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.