‘ಅಭಿವೃದ್ಧಿಗೆ 4 ಸಂಸ್ಥೆಗ ಕಾರಣ’
‘ಕಲಬುರಗಿಯ ಬೆಳವಣಿಗೆಯಲ್ಲಿ ಶರಣಬಸವೇಶ್ವರ ಸಂಸ್ಥಾನ ಎಚ್‌ಇಕೆ ಸಂಸ್ಥೆ ನೂತನ ವಿದ್ಯಾಲಯದ ಸಂಸ್ಥೆ ಹಾಗೂ ಕೆಬಿಎನ್ ಸಂಸ್ಥೆಯ ಬಹಳ ಹಿರಿದಾಗಿದೆ. ಈ ನಾಲ್ಕೂ ಸಂಸ್ಥೆಗಳ ಸೇವೆಯ ಫಲವಾಗಿ ಕಲಬುರಗಿಯನ್ನು ಶೈಕ್ಷಣಿಕ ಹಬ್ ಆಗಿ ಮಾಡಲು ಸಾಧ್ಯವಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ‘ಈ ಸಂಸ್ಥೆಗಳ ಸ್ಥಾಪನೆಗೂ ಮುನ್ನ ಈ ಭಾಗದಲ್ಲಿ ಶಾಲಾ–ಕಾಲೇಜುಗಳ ಕೊರತೆಯಿತ್ತು. ಶಿಕ್ಷಣದ ಮಟ್ಟವೂ ಕಡಿಮೆಯಿತ್ತು. ಆದರೆ ಕ್ರಮೇಣ ಸುಧಾರಣೆ ಕಂಡಿದ್ದು ಸದ್ಯ ನಾಲ್ಕು ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿವೆ. 317(1) ಕಾನೂನು ಕಲ್ಯಾಣ ಕರ್ನಾಟಕದ ಇತಿಹಾಸವನ್ನೇ ಬದಲಿಸಿತು. ಇದರ ಹಿಂದೆ ದಶಕಗಳ ಹೋರಾಟವಿದ್ದರೂ ಅದರ ಶ್ರೇಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ’ ಎಂದರು.