ಮಹಿಳಾ ಚಾಲಕರಿಗೆ ವಾಹನ ನೀಡದಿರುವುದು ವೇತನ ಪಾವತಿಯಾಗದಿರುವ ವಿಚಾರ ಗಮನಕ್ಕೆ ಬಂದಿದ್ದು ಪಂಚಾಯಿತಿ ಬಜೆಟ್‌ನಲ್ಲೇ ಈ ಖರ್ಚನ್ನು ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಹಿಳೆಯರಿಗೆ ವಾಹನ ಕೊಡುವಂತೆ ಪಿಡಿಒಗಳಿಗೆ ಸೂಚಿಸಲಾಗುವುದು
ಭಂವರ್ ಸಿಂಗ್ ಮೀನಾ ಜಿಲ್ಲಾ ಪಂಚಾಯಿತಿ ಸಿಇಒ
ಜಿಲ್ಲಾ ಪಂಚಾಯಿತಿಗಳಿಂದ ವಾಹನ ನೀಡಿದ್ದರೂ ಹಲವು ಗ್ರಾ.ಪಂ.ಗಳಲ್ಲಿ ಆರ್.ಸಿ. ಬುಕ್‌ಗಳು ಕಳೆದು ಹೋಗಿವೆ. ಆರ್‌ಟಿಒ ಅಧಿಕಾರಿಗಳೊಂದಿಗೆ ಮಾತನಾಡಿ ಅವುಗಳ ಪ್ರತಿ ಪಡೆದಿದ್ದು ತಾಲ್ಲೂಕಿನ 36 ವಾಹನಗಳಿಗೆ ವಿಮೆ ಮಾಡಿಸುತ್ತಿದ್ದೇವೆ
ಮಾನಪ್ಪ ಕಟ್ಟಿಮನಿ ತಾ.ಪಂ. ಇಒ ಆಳಂದ
ಜಿಲ್ಲೆಯ ಬಹುತೇಕ ಪಂಚಾಯಿತಿಗಳಲ್ಲಿ ವಾಹನ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಕಾಲಕ್ಕೆ ವೇತನವನ್ನೂ ಕೊಡುತ್ತಿಲ್ಲ. ನನಗೆ 10 ತಿಂಗಳ ವೇತನ ಇನ್ನೂ ಬಂದಿಲ್ಲ
ಸುವರ್ಣಾ ಪಟ್ಟಣ ಗ್ರಾ.ಪಂ.
ವಾಹನ ಚಾಲಕಿಯಾಗಿ ಕೆಲಸ ಮಾಡಿದರೂ ಒಂದು ತಿಂಗಳ ವೇತನವನ್ನೂ ಕೊಟ್ಟಿಲ್ಲ. ಇದರಿಂದ ನಮ್ಮ ಮನೆಯಲ್ಲಿ ಕೆಲಸಕ್ಕೆ ಹೋಗಬೇಡ ಎನ್ನುತ್ತಿದ್ದಾರೆ. ಕೆಲಸವೂ ಇಲ್ಲದೇ ವೇತನವೂ ಇಲ್ಲದೇ ಖಾಲಿ ಕುಳಿತಿದ್ದೇನೆ