ಕಲಬುರಗಿ: ನಗರದ ಖರ್ಗೆ ಪೆಟ್ರೋಲ್ ಬಂಕ್– ಹುಮನಾಬಾದ್ ಕ್ರಾಸ್ ನಡುವಿನ ರಿಂಗ್ ರಸ್ತೆಯಲ್ಲಿ ತಡರಾತ್ರಿ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ, ಚಾಲಕರನ್ನು ಹೆದರಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎಂಬಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಟೊ ಚಾಲಕ ಲೋಕೇಶ ಸಾತಪೊತೆ (23), ಬೀದರ್ ಜಿಲ್ಲೆಯ ಬಸವಕಲ್ಯಾಣದ ಜಾದವ ಮುಗಳಿಯ ಪಾನಿಪೂರಿ ವ್ಯಾಪಾರಿ ಶುಭಂ ಪನಬೊನೆ (26) ಹಾಗೂ ಕಟ್ಟಡ ಕಾರ್ಮಿಕ ಸೈಯದ್ ಅಲ್ತಾಪ್ (22) ಬಂಧಿತ ಆರೋಪಿಗಳು.