ಕಲಬುರಗಿ: ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 61 ಗ್ರಾಂ ಬಂಗಾರದ ಆಭರಣ ಹಾಗೂ 680 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು ₹7.62 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

‘ಐದು ಮನೆ ಕಳ್ಳತನ ಮತ್ತು ಒಂದು ಸುಲಿಗೆ ಪ್ರಕರಣವನ್ನು ಭೇದಿಸಲಾಗಿದೆ. ಆರೋಪಿಗಳಾದ ನಗರದ ನೃಪತುಂಗ ಕಾಲೊನಿಯಲ್ಲಿ ವಾಸವಾಗಿದ್ದ ಅಫಜಲಪುರ ತಾಲ್ಲೂಕಿನ ಗೌರ(ಬಿ) ಗ್ರಾಮದ ಕಲ್ಲಪ್ಪ ಅಲಿಯಾಸ ಸಂಜು ಸೋಮಣ್ಣ ಪೂಜಾರಿ (24), ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಚಣ ಗ್ರಾಮದ ಸಂತೋಷ ಶಂಕ್ರೆಪ್ಪ ಪೂಜಾರಿ (30) ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣದ ವಿವರ: ‘ಶ್ರೀನಿವಾಸ ಸರಡಗಿಯ ದಾರುನಾಯಕ ತಾಂಡಾದ ಸುನೀತಾ ಮೋಹನ ರಾಠೋಡ ಅವರು ನ.22ರಂದು ಬೆಳಿಗ್ಗೆ 10.30ಕ್ಕೆ ಓಂ ನಗರ ಗೇಟ್ ಹತ್ತಿರ ಕೂಲಿ ಕೆಲಸಕ್ಕೆಂದು ನಿಂತಿರುವಾಗ ಕಟ್ಟಡ ಕಾರ್ಮಿಕರಾಗಿದ್ದ ಕಲ್ಲಪ್ಪ ಮತ್ತು ಸಂತೋಷ ಪ್ಲಾಸ್ಟರ್ ಕೆಲಸವಿದೆ ಎಂದು ಕರೆದುಕೊಂಡು ಹೋಗಿದ್ದರು. ಕೇಂದ್ರೀಯ ವಿದ್ಯಾಲಯದ ಹತ್ತಿರದ ವಾಜಪೇಯಿ ಲೇಔಟ್ ಬಳಿ ಆಟೊ ನಿಲ್ಲಿಸಿ ನಡೆದುಕೊಂಡು ಹೋಗುವಾಗ ಸಂತೋಷ ಸಲಾಕೆ, ಪುಟ್ಟಿ, ಟಿಕಾವ ತರುತ್ತೇನೆ ಎಂದು ಹೋಗಿದ್ದಾನೆ. ಕಲ್ಲಪ್ಪ ಎಂಬಾತ ಮಹಿಳೆ ಕೊರಳಲ್ಲಿನ 3 ಗ್ರಾಂ ಮಂಗಳಸೂತ್ರವನ್ನು ಕಿತ್ತುಕೊಂಡು ಹೋಗಿದ್ದ’ ಎಂದರು.

‘ಈ ಪ್ರಕರಣದ ಪತ್ತೆಗಾಗಿ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಎಚ್.ನಾಯಕ್, ಎಸಿಪಿ ಬಸವೇಶ್ವರ ಹೀರಾ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಸಿಬ್ಬಂದಿ ಸಂಜುಕುಮಾರ, ಪ್ರಕಾಶ ಬೀರನೂರ, ರಾಜಕುಮಾರ, ಪ್ರಕಾಶ ಬಾಗೇವಾಡಿ, ನಾಗೇಂದ್ರ ಸಗರ, ಶಿವಶರಣ, ಯಶವಂತರಾವ ಹಾಗೂ ಶಿವಶರಣಪ್ಪ, ಶರಣಬಸಪ್ಪ ಜವಳಿ, ಶರಣು ವಾಡಿ, ಬಸವರಾಜ ಹಾಗೂ ಚನ್ನವೀರೇಶ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮಂಗಳಸೂತ್ರ ಸುಲಿಗೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದರು.

‘ಕಲ್ಲಪ್ಪ ಎಂಬಾತ ಒಟ್ಟು 5 ಮನೆ ಕಳ್ಳತನ ಹಾಗೂ 1 ಸುಲಿಗೆ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ಈತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಮೋಜಿಗಾಗಿ ಮನೆಗಳಲ್ಲಿ ಕಳ್ಳತನ ಮಾಡುವುದನ್ನು ರೂಢಿಸಿಕೊಂಡಿದ್ದ. ಸಂತೋಷ ಒಂದು ಸುಲಿಗೆ ಪ್ರಕರಣದಲ್ಲಿ ಮಾತ್ರ ಬಾಗಿಯಾಗಿರುವುದು ಗೊತ್ತಾಗಿದೆ. ಇವರಿಂದ ಈಗಾಗಲೇ ಶೇ 70ರಿಂದ 80ರಷ್ಟು ಸ್ವತ್ತು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.

ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪೊಲೀಸ್ ಕಮಿಷನರ್ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.