ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಎಸ್‌ಬಿಆರ್‌ ಮೇಲುಗೈ

Published 26 ಏಪ್ರಿಲ್ 2024, 4:30 IST
Last Updated 26 ಏಪ್ರಿಲ್ 2024, 4:30 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.

ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತಲೂ ಅಧಿಕ, ಏಳು ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತಲೂ ಅಧಿಕ, 9 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತಲೂ ಹೆಚ್ಚು ಹಾಗೂ 13 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತಲೂ ಹೆಚ್ಚು ಅಂಕ ಪಡೆದಿದ್ದಾರೆ. 46 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತಲೂ ಹೆಚ್ಚಿನ ಅಂಕ ಪಡೆದಿರುವುದು ವಿಶೇಷ.

ವಿನಯಕುಮಾರ ಕುಸಬೆಗೌಡರ 99.79 ಪರ್ಸಂಟೈಲ್‌ನೊಂದಿಗೆ ಕಾಲೇಜಿಗೆ ಮೊದಲ ಸ್ಥಾನ ಪಡೆದರೆ, ರೋಹನ ರಾಜಶೇಖರ 99.55 ಪರ್ಸಂಟೈಲ್‌ನೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಂಬರೀಷ್‌ ಹಿಬಾರೆ 99.47 ಪರ್ಸಂಟೈಲ್‌ನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಮಲ್ಲಿಕಾರ್ಜುನ ಬೊಗಳೆ 99.21, ಭರತ ಪಾವಲೆ 98.95, ಶರಣರಾಜ ಸಿದ್ದಣ್ಣ 98.91, ಮೊಹಮ್ಮದ್ ಫೈಸಲ್‌ ಶೇರಭಾಯಿ 98.75, ಪಂಚಾಕ್ಷರಿ ರಾಜಶೇಖರ 98.67, ಸುಧನ್ವ ಡಂಬಳ 98.35, ಸಮರ್ಥ ಎಸ್‌.ಬಿ. 98.26, ಓಂಕಾರ ಮಲ್ಲಿಕಾರ್ಜುನ 98.21, ವಂದನಾ ಎಸ್‌.ಎಚ್‌. 97.94, ಮೇಘನಾ ಬಸವರಾಜ 97.76, ಗೌರಿ ವಿಠ್ಠಲರಾವ್‌ 97.60, ಅಭಿನವ ರೆಡ್ಡಿ 97.60, ಭೂಮಿಕಾ ಪಾಟೀಲ 97.44, ದಿನೇಶ ರಾಠೋಡ 97.40, ಸಚ್ಛಿದಾನಂದ ಧರ್ಮೇಂದ್ರ 97.38, ಶ್ರೀಓಂ ಬೊರಲಕರ್ 97.11, ಅಭಿಷೇಕ ಶರಣಬಸಪ್ಪ 97.07, ವೀರೇಶ ಮಠಪತಿ 96.98, ಮನೀಷ್‌ ಪಾಟೀಲ 96.95, ಲಕ್ಷ್ಮಿ ಕಟ್ಟಿಮನಿ 96.95, ಮನೋಜ ಬಸಪ್ಪ 96.93, ಅಭಿಷೇಕ ಸೂರ್ಯವಂಶಿ 96.93, ಅಭಿಷೇಕ ಅಶೋಕ 96.69, ಸಿದ್ದನಗೌಡ ಪಾಟೀಲ 96.65, ಪೃಥ್ವಿರಾಜ ಜಗನ್ನಾಥ 96.60, ಶ್ರೀಶಾಂತ ರೆಡ್ಡಿ 96.28, ದಿವಾಕರ ಹೊಟ್ಟಿ 96.20, ಅಪ್ಪಣ್ಣ ಹವಳಗಿ 96.20, ಅರುಣ ಅಳ್ಳೊಳ್ಳಿ 96.09, ಪ್ರಾಚಿ ರೆಡ್ಡಿ 96 ಪರ್ಸಂಟೈಲ್‌ ಅಂಕ ಗಳಿಸಿ ಮಿಂಚಿದ್ದಾರೆ.

ಒಟ್ಟಾರೆ, ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕ ಸಾಧನೆ ತೋರಿದ 168 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಎನ್.ಐ.ಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ. ಜೊತೆಗೆ ಜೆಇಇ ಅಡ್ವಾನ್ಸಡ್‌ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ, ಚೇರಪರ್ಸನ್‌ ದಾಕ್ಷಾಯಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಾಚಾರ್ಯ ಎನ್.ಎಸ್.ದೇವರಕಲ್, ಕಾಲೇಜಿನ ಮೇಲ್ವಿಚಾರಕ ಶ್ರೀಶೈಲ್ ಹೊಗಾಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT