ಕಲಬುರಗಿ: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿಗೆ ನಿಗದಿಪಡಿಸಿದ್ದ ಹಿಂದಿನ ಪ್ರಮಾಣ ತೆಗೆದು ಹಾಕಿ, ಲಭ್ಯವಿರುವ ರೈತರ ಬೆಳೆಯ ಮಾಹಿತಿಯ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲು ಅವಕಾಶ ನೀಡಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಹೆಸರು, ಉದ್ದು, ಸೂರ್ಯಕಾಂತಿ ಬೆಳೆದ ರೈತರು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಡಿ.13ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. 23ರ ಒಳಗಾಗಿ ಮಾರಾಟ ಮಾಡಬೇಕು. ಸೋಯಾಬಿನ್ ಬೆಳೆದ ರೈತರು 17ರ ಒಳಗಾಗಿ ನೋಂದಣಿ ಮಾಡಿಕೊಳ್ಳಬೇಕು. 27ರವರೆಗೆ ಮಾರಾಟ ಮಾಡಲು ಅವಕಾಶವಿದೆ. ಸರ್ಕಾರದ ಆದೇಶದಂತೆ ಹೆಸರಿಗೆ ₹ 8,768, ಉದ್ದಿನ ಕಾಳು ₹ 7,800, ಸೂರ್ಯಕಾಂತಿ ₹ 7,721, ಸೋಯಾಬಿನ್ಗೆ ₹ 5,328 ದರ ನಿಗದಿ ಮಾಡಿದೆ.

ಹೆಚ್ಚಿನ ಮಾಹಿತಿಗೆ ಉದ್ದಿನ ಕಾಳು ಮತ್ತು ಸೋಯಾಬಿನ್ ಖರೀದಿಗೆ ಮೊಬೈಲ್ ಸಂಖ್ಯೆ: 94498 64446, ಹೆಸರು ಖರೀದಿಗೆ 99644 74444, ಸೂರ್ಯಕಾಂತಿ ಖರೀದಿಗೆ 95918 12142 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.