ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನಾಗರಾಳ‌ ಜಲಾಶಯ ಭರ್ತಿ

Last Updated 15 ಜುಲೈ 2020, 5:33 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕೆಳದಂಡೆ ಮುಲ್ಲಾಮಾರಿ ಯೋಜನೆಯ ತಾಲ್ಲೂಕಿನ ಚಿಮ್ಮನಚೋಡ ಬಳಿಯ ನಾಗರಾಳ ಜಲಾಶಯ ಭರ್ತಿಯಾಗಿದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಣಮಂತ ಪೂಜಾರಿ ತಿಳಿಸಿದ್ದಾರೆ.

ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದ್ದು ಪ್ರಸ್ತುತ ಜಲಾಶಯದ ನೀರಿನ ಮಟ್ಟ 490.5 ಮೀ. ತಲುಪಿದೆ. ಪ್ರಯುಕ್ತ ಯಾವುದೇ ಕ್ಷಣದಲ್ಲಿ ಜಲಾಶಯದ ಹೆಚ್ಚುವರಿ ನೀರು ಗೇಟುಗಳ ಮೂಲಕ ಮುಲ್ಲಾಮಾರಿ ನದಿಗೆ ಬಿಡಲಾಗುವುದು ಎಂದು ಅವರು ತಿಳಿಸಿದರು.

ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ ಹರಿವು ಹೆಚ್ಚಾಗಿದೆ. ಸಧ್ಯ 800ರಿಂದ 1000 ಕ್ಯೂಸೆಕ್ ಒಳ ಹರಿವಿದೆ. ಅದರಂತೆ ಜಲಾಶಯ ಅಪಾಯದ ಮಟ್ಟದಲ್ಲಿ‌ನೀರು ಹರಿಯದಂತೆ ನೋಡಿಕೊಳ್ಳು ಹೆಚ್ಚುವರಿ‌ ನೀರು ಬಿಡಲಾಗುವುದು. ಕಾರಣ ನದಿ ಪಾತ್ರದ ಜನರು ನದಿಯಲ್ಲಿ ಇಳಿಯುವುದಾಗಲಿ, ಮೀನುಗಾರಿಕೆ ನಡೆಸುವುದಾಗಲಿ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಲಬುರ್ಗಿಯಲ್ಲಿ ‌ಮಳೆ: ಮಂಗಳವಾರ ರಾತ್ರಿಯಿಂದ ಆರಂಭವಾಗಿರುವ ಜಿಟಿಜಿಟಿ ಮಳೆ ಈಗಲೂ ‌ಸುರಿಯುತ್ತಿದೆ.

ಬಿಸಿಲ ನಾಡಲ್ಲೀಗ ಮಲೆನಾಡಿನ ಸೊಬಗು ದಟ್ಟೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT