ಕಲಬುರ್ಗಿ:ಸುಮಾರು 10 ಗಂಟೆ ಸತತವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಕಲಬುರ್ಗಿ, ಬೀದರ್ ಜಿಲ್ಲೆಗಳ ರಸ್ತೆಗಳೆಲ್ಲ ನದಿಯಂತೆ ತುಂಬಿ ಹರಿದವು. ತಗ್ಗುಪ್ರದೇಶದ ಬಹುಪಾಲು ಬಡಾವಣೆಗಳಲ್ಲಿ ಹಾಗೂ ಜಮೀನುಗಳಲ್ಲಿ ಕೆರೆಯಂತೆ ನೀರು ನಿಂತಿತ್ತು. ನಗರ ಪ್ರದೇಶಗಳಲ್ಲಿಯ ಉದ್ಯಾನಗಳು, ಕ್ರೀಡಾಂಗಣಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಅವು ಈಜುಕೊಳದಂತೆ ಕಾಣುತ್ತಿದ್ದವು.

‘ರಾತ್ರಿ ಮನೆಯಲ್ಲಿ ನೀರು ತುಂಬಿಕೊಳ್ಳಲಾರಂಭಿಸಿತು. ಮನೆ ಎದುರು ಹೊಳೆಯೇ ಹರಿಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು. ತಕ್ಷಣ ಮೊದಲ ಮಹಡಿಗೆ ತೆರಳಿದೆವು’ ಎಂದು ಕಲಬುರ್ಗಿ ರಾಜಾಜಿ ನಗರದ ಗುರುರಾಜ ಕುಲಕರ್ಣಿ ಹೇಳಿದರು.

ಮಹಾರಾಷ್ಟ್ರದಿಂದಲೂ ನೀರು: ಮಹಾರಾಷ್ಟ್ರದಲ್ಲಿಯೂ ಮಳೆಯಾಗುತ್ತಿದ್ದು, ಭೀಮಾ ನದಿಗೆ ನೀರು ಬಿಡಲಾಗುತ್ತಿದೆ.ಯಾದಗಿರಿ ಜಿಲ್ಲೆಯಲ್ಲಿ ನದಿ ತೀರದಲ್ಲಿರುವ 44 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಮಹಾರಾಷ್ಟ್ರದ ಲಾತೂರ ಜಲಾಶಯದಿಂದ ಹೆಚ್ಚುವರಿ ನೀರು ಬರುತ್ತಿರುವ ಕಾರಣ ಬೀದರ್ ಜಿಲ್ಲೆಯಲ್ಲಿ ಮಾಂಜ್ರಾ ನದಿ ಪಾತ್ರದಲ್ಲಿ ಪ್ರವಾಹ ಆತಂಕ ಎದುರಾಗಿದೆ.

ರಾಯಚೂರು ವರದಿ: ನಗರದ ತಗ್ಗು ಪ್ರದೇಶದಲ್ಲಿಯ ಮನೆಗಳಿಗೆ ನೀರು ನುಗ್ಗಿದ್ದರೆ, ಲಿಂಗಸುಗೂರು ತಾಲ್ಲೂಕುಯಲಗಟ್ಟಿ ಗ್ರಾಮದಲ್ಲಿ 30 ಮನೆಗಳು ಕುಸಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.