ಕಲಬುರಗಿ: ಪಂಢರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮಿ ಭಕ್ತರ ವರ್ಷಗಳ ಕನಸು ನನಸಾಗುವ ಕಾಲ ಬಂದಿದೆ. ಸೊಲ್ಲಾಪುರ–ಮಿರಜ್ ಮಧ್ಯೆ ಸಂಚರಿಸುವ ರೈಲನ್ನು ಕಲಬುರಗಿ ಹಾಗೂ ಕೊಲ್ಹಾಪುರದವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಿವೆ.

ಈ ಸಂಬಂಧ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಸೊಲ್ಲಾಪುರ ಹಾಗೂ ಪುಣೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಪತ್ರ ಬರೆದಿದ್ದು, ಈ ರೈಲು ಸೇವೆ ವಿಸ್ತರಣೆಗೆ ಸಂಸದರು, ಶಾಸಕರು, ರೈಲ್ವೆ ಬಳಕೆದಾರರ ಸಂಘಗಳು ಹಾಗೂ ಸಾರ್ವಜನಿಕರ ಒತ್ತಾಯವಿದೆ. ಹೀಗಾಗಿ, ಸೊಲ್ಲಾಪುರ–ಮಿರಜ್ ರೈಲನ್ನು ಕ್ರಮವಾಗಿ ಕಲಬುರಗಿ–ಕೊಲ್ಹಾಪುರದವರೆಗೆ ವಿಸ್ತರಿಸಬೇಕು ಎಂದು ಜನವರಿ 10ರಂದು ಪತ್ರದಲ್ಲಿ ತಿಳಿಸಿದ್ದಾರೆ.

ಡಿಆರ್‌ಎಂಗಳ ಪ್ರಸ್ತಾವವನ್ನು ಕ್ರೋಡೀಕರಿಸಿ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ರೈಲ್ವೆ ಮಂಡಳಿಯ ಒಪ್ಪಿಗೆಗಾಗಿ ಪತ್ರ ಬರೆಯಲಿದ್ದಾರೆ.

ಐದು ವರ್ಷಗಳ ಬೇಡಿಕೆ: ಕಲಬುರಗಿಯಿಂದ ಸುಮಾರು 428 ಕಿ.ಮೀ. ದೂರ ಇರುವ ಕೊಲ್ಹಾಪುರಕ್ಕೆ ಇಂದಿಗೂ ನೇರ ರೈಲು ಸಂಪರ್ಕವಿಲ್ಲ. ಇಂದಿಗೂ ರಸ್ತೆ ಸಾರಿಗೆಯೇ ಅನಿವಾರ್ಯವಾಗಿದೆ. ರೈಲು ಸೌಕರ್ಯವಾದರೆ ಪಂಢರಾಪುರ ಹಾಗೂ ಕೊಲ್ಹಾಪುರಕ್ಕೆ ಭಕ್ತರು ತೆರಳಲು ಅನುಕೂಲವಾಗುತ್ತದೆ. ಜೊತೆಗೆ ಕೊಲ್ಹಾಪುರ, ಮಿರಜ್ ಭಾಗದ ಭಕ್ತರು ಜಿಲ್ಲೆಯ ಗಾಣಗಾಪುರಕ್ಕೆ ಬರಲು ಅನುಕೂಲವಾಗುತ್ತದೆ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಅಧ್ಯಕ್ಷ ಸುನೀಲ ಕುಲಕರ್ಣಿ.

‘ಈ ಸಂಬಂಧ ಸಂಸದ ಡಾ. ಉಮೇಶ ಜಾಧವ ಅವರ ಮೇಲೆಯೂ ಒತ್ತಡ ಹೇರುತ್ತಿದ್ದೇವೆ. ರೈಲ್ವೆ ಅಧಿಕಾರಿಗಳೊಂದಿಗೂ ಸಂಪರ್ಕ ಸಾಧಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.