ಭಾನುವಾರ, ಮೇ 22, 2022
25 °C

ಮಹಿಳೆಯರ 40ನೇ ಕ್ರೀಡಾಕೂಟ: ಕಾಳಗಿ ಕಾಲೇಜು ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅಂತರ ಮಹಾವಿದ್ಯಾಲಯಗಳ ಮಹಿಳೆಯರ 40ನೇ ಕ್ರೀಡಾಕೂಟದಲ್ಲಿ ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಒಟ್ಟು 25 ಅಂಕಗಳನ್ನು ಸಂಪಾದಿಸಿದ ಕಾಲೇಜು, ಪ್ರಿಯದರ್ಶಿನಿ ಚಾಲೆಂಜ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಅಲ್ಲದೆ, ರಿಲೇಯಲ್ಲಿಯೂ ಚಾಂಪಿಯನ್‌ ಆದ ಕಾಲೇಜು ಪೂಜ್ಯ ದೊಡ್ಡಪ್ಪ ಅಪ್ಪ ಸ್ಮಾರಕ ಟ್ರೋಫಿ ಪಡೆಯಿತು.

ಕ್ರೀಡಾಕೂಟದ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದ ಕಲಬುರಗಿಯ ಸೇಂಟ್ ಕ್ಸೇವಿಯರ್ ಕಾಲೇಜಿನ ಶ್ರೀಲೇಖಾ ಅವರು ಪೀರಪ್ಪ ಹೆಬ್ಬಾಳ ಸ್ಮಾರಕ ಟ್ರೋಫಿ ಪಡೆದರು. ಇವರು 15.6 ಸೆಕೆಂಡ್‌ಗಳಲ್ಲಿ 100 ಮೀ.ಓಟವನ್ನು ಕ್ರಮಿಸಿದರು.

ದೂರದ ಓಟ ವಿಭಾಗದಲ್ಲಿ ಚಾಂಪಿಯನ್‌ ಸ್ಥಾನವನ್ನು ಕಾಳಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕರೀಷ್ಮಾ, ಕಲಬುರಗಿಯ ಗುಲಬರ್ಗಾ ವಿ.ವಿ.ಯ ಸ್ನಾತಕೋತ್ತರ ಕೇಂದ್ರದ ಪವಿತ್ರಾ ಮತ್ತು ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಜಲಿ ಹಂಚಿಕೊಂಡರು. ಎಲ್ಲರೂ ತಲಾ ಐದು ಅಂಕಗಳನ್ನು ಕಲೆ ಹಾಕಿದರು.

ಶಹಾಬಾದ್‌ನ ಎಸ್.ಎಸ್.ಮರಗೋಳ ಕಾಲೇಜಿನ ಸುಕನ್ಯಾ ಅವರು ಕಡಿಮೆ ದೂರದ ಓಟ (ಎಂಟು ಅಂಕ) ವಿಭಾಗದಲ್ಲಿ ಚಾಂಪಿಯನ್ ಆದರು. ಬಸವಕಲ್ಯಾಣದ ಎಸ್‌.ಎಸ್.ಕೆ.ಬಿ ಕಾಲೇಜಿನ ಸುಕನ್ಯಾ ಟ್ರ್ಯಾಕ್ ವಿಭಾಗದಲ್ಲಿ (ಎಂಟು ಅಂಕ) ಮತ್ತು ಸ್ವಾತಿ ಅವರು ಫೀಲ್ಡ್ ವಿಭಾಗದಲ್ಲಿ (10 ಅಂಕ) ಚಾಂಪಿಯನ್‌ ಆಗಿ ಹೊರಹೊಮ್ಮಿದರು.ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ, ಪದಕ ಮತ್ತು ಟ್ರೋಫಿ ಪ್ರದಾನ ಮಾಡಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರ ವಿವರ (ಮೊದಲ ಮೂರು ಸ್ಥಾನ ಪಡೆದವರು):

800 ಮೀ.ಓಟ: ಮಾಣಿಕಮ್ಮ–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಹಾಪುರ), ರೇಣುಕಾ–ದ್ವಿತೀಯ (ಎಸ್.ಎಸ್.ಮರಗೋಳ ಕಾಲೇಜು ಶಹಾಬಾದ್‌), ಸಾಬಲಿಂಗಮ್ಮ–ತೃತೀಯ (ಮಾತೋಶ್ರೀ ಕಾಲೇಜು, ಯಾದಗಿರಿ).

1,500 ಮೀ.ಓಟ: ಕರೀಷ್ಮಾ–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿ), ರೇಣುಕಾ–ದ್ವಿತೀಯ (ಎಸ್.ಎಸ್.ಮರಗೋಳ ಕಾಲೇಜು ಶಹಾಬಾದ್‌), ಪವಿತ್ರಾ–ತೃತೀಯ (ಗುಲಬರ್ಗಾ ವಿ.ವಿ ಸ್ನಾತಕೋತ್ತರ ಕೇಂದ್ರ, ಕಲಬುರಗಿ).

ಶಾಟ್‌ಪಟ್‌: ಕವಿತಾ–ಪ್ರಥಮ (ಶರಣಬಸವೇಶ್ವರ ವಿಜ್ಞಾನ ಕಾಲೇಜು ಕಲಬುರಗಿ), ರೇಣುಕಾ –ದ್ವಿತೀಯ (ಗುರುಕುಲ ಕಾಲೇಜು ಕಲಬುರಗಿ), ಲಕ್ಷ್ಮಿ–ತೃತೀಯ (ಬಿ.ಶ್ಯಾಮಸುಂದರ ಬಿಪಿ.ಇಡಿ ಕಾಲೇಜು, ಕಲಬುರಗಿ).

4x400 ಮೀ.ರಿಲೇ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿ–ಪ್ರಥಮ, ಗುಲಬರ್ಗಾ ವಿ.ವಿ ಸ್ನಾತಕೋತ್ತರ ಕೇಂದ್ರ ಕಲಬುರಗಿ–ದ್ವಿತೀಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್‌–ತೃತೀಯ.

ಚಕ್ರ ಎಸೆತ: ರೇಣುಕಾ–ಪ್ರಥಮ (ಗುರುಕುಲ ಕಾಲೇಜು, ಕಲಬುರಗಿ), ಸಂಜನಾ–ದ್ವಿತೀಯ (ಎಸ್.ಎಸ್.ಮರಗೋಳ ಕಾಲೇಜು ಶಹಾಬಾದ್‌), ಸೌಮ್ಯಶ್ರೀ–ತೃತೀಯ (ಬಿ.ಶ್ಯಾಮಸುಂದರ ಬಿಪಿ.ಇಡಿ ಕಾಲೇಜು, ಕಲಬುರಗಿ).

200 ಮೀ.ಓಟ: ಸಂಗೀತಾ–ಪ್ರಥಮ (ಶರಣಬಸವೇಶ್ವರ ಕಲಾ ಕಾಲೇಜು, ಕಲಬುರಗಿ), ಸುನಂದಾ ಎಚ್‌.,–ದ್ವಿತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲ್).

100 ಮೀ.ಓಟ: ಶ್ರೀಲೇಖಾ–ಪ್ರಥಮ (ಸೇಂಟ್ ಕ್ಸೇವಿಯರ್ ಕಾಲೇಜು, ಕಲಬುರಗಿ), ಸುಕನ್ಯಾ–ದ್ವಿತೀಯ (ಎಸ್‌ಎಸ್‌ಕೆಬಿ ಕಾಲೇಜು, ಬಸವಕಲ್ಯಾಣ), ಸುಧಾರಾಣಿ–ತೃತೀಯ (ನೃಪತುಂಗ ಕಾಲೇಜು, ಸೇಡಂ).

400 ಮೀ.ಓಟ: ಸುಕನ್ಯಾ–ಪ್ರಥಮ (ಎಸ್‌ಎಸ್‌ಕೆಬಿ ಕಾಲೇಜು, ಬಸವಕಲ್ಯಾಣ), ಅಪೂರ್ವ–ದ್ವಿತೀಯ (ಕರ್ನಾಟಕ ಕಾಲೇಜು ಬೀದರ್‌), ಸುಭಾಂಗಿ–ತೃತೀಯ (ಸಿ.ಬಿ.ಕಾಲೇಜು, ಭಾಲ್ಕಿ).

5000 ಮೀ.ಓಟ: ಅಂಜಲಿ–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್‌), ಪವಿತ್ರಾ–ದ್ವಿತೀಯ (ಗು.ವಿ.ವಿ ಸ್ನಾತಕೋತ್ತರ ಕೇಂದ್ರ, ಕಲಬುರಗಿ), ಮಧುಪ್ರಿಯ–ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್‌).

4x100 ಮೀ.ರಿಲೇ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಳಗಿ–ಪ್ರಥಮ, ಎಸ್‌.ಎಸ್.ಮರಗೋಳ ಕಾಲೇಜು ಶಹಾಬಾದ್‌–ದ್ವಿತೀಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಹಾಪುರ–ತೃತೀಯ.

ಜಾವಲಿನ್ ಎಸೆತ: ಸ್ವಾತಿ–ಪ್ರಥಮ (ಎಸ್‌ಎಸ್‌ಕೆಬಿ ಕಾಲೇಜು, ಬಸವಕಲ್ಯಾಣ), ಪ್ರತಿಕಾ–ದ್ವಿತೀಯ (ಶರಣಬಸವೇಶ್ವರ ಕಲಾ ಕಾಲೇಜು, ಕಲಬುರಗಿ), ರಹೆಮತಬೀ–ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುರುಮಠಕಲ್).

ಎತ್ತರ ಜಿಗಿತ: ಸುನಂದಾ ಎಚ್‌.–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುರುಮಠಕಲ್), ಸುಧಾರಾಣಿ–ದ್ವಿತೀಯ (ನೃಪತುಂಗ ಕಾಲೇಜು, ಸೇಡಂ), ಭಾಗ್ಯಶ್ರೀ–ತೃತೀಯ (ಎಸ್‌ಎಸ್‌ಕೆಬಿ ಕಾಲೇಜು, ಬಸವಕಲ್ಯಾಣ).

ಉದ್ದ ಜಿಗಿತ: ಸ್ವಾತಿ–ಪ್ರಥಮ (ಎಸ್‌ಎಸ್ ಕೆಬಿ ಕಾಲೇಜಿ, ಬಸವಕಲ್ಯಾಣ), ಸುಧಾರಾಣಿ–ದ್ವಿತೀಯ (ನೃತಪುಂಗ ಕಾಲೇಜು ಸೇಡಂ), ಶ್ರೀಲೇಖ–ತೃತೀಯ (ಸೇಂಟ್ ಕ್ಸೇವಿಯರ್ ಕಾಲೇಜು, ಕಲಬುರಗಿ).

‘ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ’
ಕಲಬುರಗಿ: ‘ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ಭಾಗವಹಿಸುವುದು ಮುಖ್ಯ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ ಮಹಾವಿದ್ಯಾಲಯಗಳ ಮಹಿಳೆಯರ 40ನೇ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಶಿಸ್ತು, ತಾಳ್ಮೆ, ಆತ್ಮಾಭಿಮಾನ, ಛಲ ಕ್ರೀಡಾಪಟುಗಳಿಗೆ ಕ್ರೀಡೆಯಿಂದ ಲಭಿಸುತ್ತದೆ. ಕ್ರೀಡಾಪಟುಗಳು ಉನ್ನತ ಸಾಧನೆ ಮಾಡಿ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಬೇಕು’ ಎಂದರು.

‘ನಾನು ವಿದ್ಯಾರ್ಥಿಯಾಗಿದ್ದಾಗ ಇದೇ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಓಡಿದ್ದೇನೆ. ಪ್ರಸ್ತುತ ಕ್ರೀಡಾಂಗಣದಲ್ಲಿ ಗುಣಮಟ್ಟದ ಸೌಲಭ್ಯಗಳು ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ ಬಿ.ಯಾದವಾಡ ಮಾತನಾಡಿದರು. 180 ಕ್ರೀಡಾಪಟುಗಳು ಭಾಗವಹಿಸಿದ್ದರು.

ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮದ ಶ್ರೀ ಪ್ರಭು (ಎಸ್.ಪಿ.) ಕಾಲೇಜಿನ ಏಕಲವ್ಯ ಬಿಲ್ವಿದ್ಯೆ ಕ್ರೀಡಾ ಕೇಂದ್ರದ 11 ಕ್ರೀಡಾಪಟುಗಳು ಬಿಲ್ಲುಗಾರಿಕೆ ಕಲೆ ಪ್ರದರ್ಶಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ಬಿ.ಎಂ.ಕನಹಳ್ಳಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಎನ್.ಜಿ. ಕಣ್ಣೂರ, ಡಾ.ಎಂ.ಎಸ್. ಪಾಸೋಡಿ, ಸಂಯೋಜಕ ಮತ್ತು ಪ್ರಾಂಶುಪಾಲ ಡಾ.ಎಚ್.ಎಸ್.ಜಂಗೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು