ಕಲಬುರ್ಗಿ: ಹಾಂಕಾಂಗ್‌ನಲ್ಲಿ ಇತ್ತೀಚೆಗೆ ನಡೆದ ಟಾಲೆಂಟ್ ಸ್ಟಾರ್ ಇಂಟರ್‌ನ್ಯಾಶನಲ್ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಗರದ 9ನೇ ತರಗತಿ ವಿದ್ಯಾರ್ಥಿನಿ ಅನನ್ಯಾ ರೈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಅನನ್ಯ ತಂದೆ ಹೋಟೆಲ್ ಉದ್ಯಮಿಯಾಗಿದ್ದರೆ, ತಾಯಿ ರೂಪಾ ಅವರು ನಗರದ ಜೆಸ್ಕಾಂನಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದಾರೆ. ನರ್ಸರಿಯಲ್ಲಿದ್ದಾಗಲೇ ಕ್ಯಾಟ್‌ವಾಕ್ ಮಾಡುತ್ತಾ ಮಾಡೆಲಿಂಗ್ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದ ಅನನ್ಯಾ ಪ್ರಸ್ತುತ ಹೈದರಾಬಾದ್‌ನ ಚೈತನ್ಯ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಓದುತ್ತಿದ್ದಾಳೆ. ಕಳೆದ ಏಪ್ರಿಲ್‌ನಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಜ್ಯೂನಿಯರ್ ಮಾಡೆಲ್ ಸ್ಪರ್ಧೆ ನಡೆದಿತ್ತು. ಇದರಲ್ಲಿ ಭಾಗವಹಿಸಿದ್ದ ಅನನ್ಯಾ ಪ್ರಶಸ್ತಿ ಪಡೆದು ಹಾಂಕಾಂಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾಳೆ.

ನಾಲ್ಕು ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಅನನ್ಯಾ ಪಾಶ್ಚಾತ್ಯ ಉಡುಗೆ ಧರಿಸಿ ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದಳು. ಅಂತಿಮ ಸುತ್ತಿನಲ್ಲಿ ಲಕ್ಷ್ಮಿ ದೇವತೆಯ ದಿರಿಸು ಧರಿಸಿ ತೀರ್ಪುಗಾರರ ಗಮನ ಸೆಳೆದಿದ್ದಳು. ನವದೆಹಲಿಯಲ್ಲಿ ನಡೆದ 13 ವರ್ಷದೊಳಗಿನ ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಳು ಎಂದು ತಾಯಿ ರೂಪಾ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.