ಕಲಬುರಗಿ: ‘ಶೈಕ್ಷಣಿಕ ಸಂಸ್ಥೆಗಳು ಕಲಿಕಾ ಗುಣಮಟ್ಟದ ಹೆಚ್ಚಳಕ್ಕೆ ಒತ್ತು ನೀಡಬೇಕು’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ನಗರದ ಆಳಂದ ರಸ್ತೆಯ ಎಸ್.ಬಿ.ಕನ್ವೆನ್ಷನ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಿಲೇನಿಯಂ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬದ ಸಂಭ್ರಮ, ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ‘ರಜತ ಗಿರಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

‘ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಲಿ ಎನ್ನುವ ಕಾಲವಿತ್ತು. ಇದೀಗ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಲಿ ಎನ್ನುವಷ್ಟು ಪರಿವರ್ತನೆಯಾಗಿದೆ. ನಮ್ಮ ಭಾಗದವರೂ ಕೇಂದ್ರ ಲೋಕಸೇವಾ ಪರೀಕ್ಷೆ ಪಾಸಾಗುತ್ತಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲು ಶಿಕ್ಷಣದ ಗುಣಮಟ್ಟಕ್ಕೆ ಒತ್ತು ನೀಡಬೇಕು’ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್ ಅಪ್ಪ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟದ ಕೊರತೆ ನೀಗಿಸುವ ಕಾರ್ಯ ಎಲ್ಲರೂ ಮಾಡಬೇಕಿದೆ. ಪವಿತ್ರವಾದ ಶಿಕ್ಷಣ ದಾಸೋಹ ಪರಂಪರೆ ಎಲ್ಲೆಡೆ ವಿಸ್ತರಿಸಬೇಕಿದೆ’ ಎಂದರು.

ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಎಂ.ಎನ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಪ್ರಮುಖರಾದ ಸೋಮಶೇಖರ ಗೋನಾಯಕ, ಪ್ರಮುಖರಾದ ಡಾ.ವಿಜ್ಞೇಶ ಕೆ.ಪಾಟೀಲ್, ಡಾ.ಸೂರ್ಯಕಾಂತ ಪಾಟೀಲ, ಡಾ.ಶರಣಗೌಡ ಎಂ. ಪಾಟೀಲ್, ಶರಣಬಸಪ್ಪ ಬೆಣ್ಣೂರ, ಬಸವರಾಜ ವಾಲಿ, ಶಿವಲಿಂಗಪ್ಪ ಕಲಶೆಟ್ಟಿ, ಭೀಮಣ್ಣಗೌಡ ದರ್ಶನಾಪುರ, ಎಚ್.ಎಸ್.ದೇಶಮುಖ, ಸುರೇಶ ಕುಮಸಗಿ, ಎಸ್.ಡಿ.ಪಾಟೀಲ್, ಗುರುಬಸಪ್ಪ ಪಾಟೀಲ್, ಸಂಗಮೇಶ ಹಿರೇಮಠ, ಅಶೋಕ ಮಸೂತಿ, ಸಂತೋಷ ಪಾಟೀಲ್ ದಣ್ಣೂರ, ಅನಿತಾ ಪಾಟೀಲ್, ಶಕುಂತಲಾ ಮಲಕೂಡ, ಅನಸೂಯಾ ಪಾಟೀಲ್, ಆರತಿ, ಶ್ರದ್ಧಾ, ಹರ್ಷಿತಾ, ಸಚಿನ ಇತರರಿದ್ದರು.

ಕಾರ್ಯದರ್ಶಿ ಅರುಣಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಶ್ರೀಶೈಲ ಗೂಳಿ ಸ್ವಾಗತಿಸಿದರು.

Quote - ಸಮಾನ ಮನಸ್ಕರು ಒಗ್ಗೂಡಿ ಕಟ್ಟಿದ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಈಗ ಇಂದು ಬೆಳ್ಳಿ ಹಬ್ಬದ ಸಡಗರ. 25 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂ.ಎನ್.ಪಾಟೀಲ ಅಧ್ಯಕ್ಷ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆ

Cut-off box - ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಿಲೇನಿಯಂ ಶಾಲೆಯಲ್ಲಿ ಅಧ್ಯಯನ ಮಾಡಿ ದೇಶ–ವಿದೇಶಿಗಳಲ್ಲಿ ನೆಲೆಸಿರುವ ಸಾವಿರಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳ ಸಮ್ಮಿಲನವೂ ಡಿ.27ರಂದು ನಡೆಯಲಿದೆ. ಹಳೇ ವಿದ್ಯಾರ್ಥಿಗಳು ಗುರುಗಳ ಸಮ್ಮಿಲನ ನಡೆಯಲಿದ್ದು ಭವಿಷ್ಯದಲ್ಲಿ ಸಂಸ್ಥೆಯ ಪ್ರಗತಿಯ ಚಿಂತನೆ ಸೇರಿ ವಿವಿಧ ವಿಚಾರಗಳ ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.