ಕೆಕೆಆರ್‌ಡಿಬಿಯಿಂದ ಹಿಂದಿನ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗಾಗಿ ಶೇ 25ರಷ್ಟು ಹಣ ಮೀಸಲಿಟ್ಟು, ಶಾಲೆಗಳಿಗೆ ಬಳಕೆ ಮಾಡಬೇಕೆಂದು ಹೇಳಿದ್ದೇವೆ. ಅದರಂತೆ ಉನ್ನತ ಶಿಕ್ಷಣ ಅಭಿವೃದ್ಧಿಗೆ ಹಣ ನೀಡುವಂತೆ ರಾಜ್ಯಪಾಲರು ಕೇಳಿದ್ದರಿಂದ ಶೇ 5ರಷ್ಟು ಮೀಸಲು ಇಡಲಾಗಿದೆ. ಇದು ಕಲ್ಯಾಣ ಕರ್ನಾಟಕದ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಲಿದೆ. ರಾಜ್ಯಪಾಲರು ವಿ.ವಿ ಕುಲಾಧಿಪತಿ ಆಗಿದ್ದರಿಂದ ಅವರಿಗೆ ಹಣ ಮೀಸಲು ಇಡಲಾಗಿದೆ. ಇದರ ಕುರಿತು ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಜತೆ ಚರ್ಚೆ ಮಾಡಿ ಈ ನಿರ್ಣಯ ಮಾಡಲಾಗಿದೆ’ ಎಂದು ಅಜಯ್ ಸಿಂಗ್ ಸ್ಪಷ್ಟಪಡಿಸಿದರು.