ಕಳೆದ ಅವಧಿಯಲ್ಲಿ ಬಹುತೇಕ ಕಡೆ ತರಗತಿ ಕೋಣೆ ನಿರ್ಮಿಸಲು ಅನುದಾನ ಒದಗಿಸಿದ್ದೇನೆ. ದಸ್ತಾಪುರ ಶಾಲೆ ಕಟ್ಟಡ ಕಾಮಗಾರಿ ಆರಂಭಿಸಲು ತಿಳಿಸಲಾಗಿದೆ. ನಾವದಗಿ (ಬಿ) ಶಾಲೆ ತರಗತಿ ಕೋಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆಬಸವರಾಜ ಮತ್ತಿಮಡು ಶಾಸಕ
ಶಿಥಿಲ ಕೋಣೆಗಳ ಪಟ್ಟಿ ಮಾಡಲಾಗಿದೆ. ಶಿಕ್ಷಕರ ಕೊರತೆ ಇರುವಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ದಾಖಲಾತಿ ಹೆಚ್ಚಳಕ್ಕೆ ವಿನೂತನ ಪ್ರಯೋಗಗಳ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯಲಾಗುತ್ತಿದೆಸೋಮಶೇಖರ ಹಂಚಿನಾಳ ಕ್ಷೇತ್ರ ಶಿಕ್ಷಣಾಧಿಕಾರಿ
ಗಡಿ ಗ್ರಾಮಗಳ ಶಿಕ್ಷಕರು ಕಚೇರಿ ಕೆಲಸಕ್ಕೆ 70 ಕಿ.ಮೀ ಅಲೆಯಬೇಕು. ಬಿಇಒ ಕಚೇರಿ ಕಮಲಾಪುರದಲ್ಲಿ ಸ್ಥಾಪಿಸಿದರೆ ಶಾಲೆಗಳ ಸೂಕ್ತ ನಿರ್ವಹಣೆಯಾಗುತ್ತದೆ. ಶಿಕ್ಷಕರಿಗೆ ಮಕ್ಕಳಿಗೂ ಅನುಕೂಲವಾಗುತ್ತದೆ.ಪರಮೇಶ್ವರ ಓಕಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಪುರ ಕಡೆಗಣಿಸುತ್ತಿದ್ದಾರೆ. ಈ ಭಾಗದ ಶಾಲೆಗಳಿಗೆ ಭೇಟಿ ನೀಡುವುದು ವಿರಳ. ಬರಿ ಕಲಬುರಗಿ ನಗರದ ಶಾಲೆಗಳನ್ನು ಸುತ್ತಾಡುತ್ತಾರೆ. ಕಮಲಾಪುರ ಭಾಗದ ಶೈಕ್ಷಣಿಕ ಪ್ರಗತಿ ಕುಂಠಿತಗೊಳುತ್ತಿದೆಶಾಂತಕುಮಾರ ಮೂಲಗೆ ಗ್ರಾ.ಪಂ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.