ಭಾನುವಾರ, ಜೂನ್ 26, 2022
22 °C

ಯುವ ಸಾಹಿತಿಗಳಿಗೆ ಕಣವಿ ಮಾದರಿ: ವೀರೇಂದ್ರ ಕೊಲ್ಲೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ‘ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಸಾಹಿತ್ಯ ರಚನೆಯ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ಸಾಹಿತಿ ಡಾ.ಚನ್ನವೀರ ಕಣವಿ ಅವರು ಇಂದಿನ ಹೊಸ ಪೀಳಿಗೆಯ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಂದ್ರ ಕೊಲ್ಲೂರ್ ಹೇಳಿದರು.

ಪಟ್ಟಣದ ಪ್ರಾರ್ಥನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕಸಾಪದಿಂದ ಆಯೋಜಿಸಿದ್ದ ಡಾ.ಚನ್ನವೀರ ಕಣವಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವರಾಜ ಯಂಭತ್ನಾಳ ಮಾತನಾಡಿದರು.

ರವೀಂದ್ರ ಸಜ್ಜನಶೆಟ್ಟಿ, ರೇವಣಸಿದ್ದಪ್ಪ ರೋಣದ, ಬಸವರಾಜ ಚಿನ್ನಮಳ್ಳಿ, ಜಗದೇವ ದಿಗ್ಗಾಂವಕರ್, ಚಂದ್ರಶೇಖರ ಉಟಗೂರ, ವೀರಭದ್ರಪ್ಪ ಗುರುಮಠಕಲ್, ಮೋನಯ್ಯ ಪಂಚಾಳ, ಮಲ್ಲಿಕಾರ್ಜುನ ಮುಡಬೂಳಕರ್ ಇದ್ದರು.

ಒಂದು ನಿಮಿಷ ಮೌನಾಚರಣೆ ಮಾಡಿ ಪುಷ್ಪನಮನ ಅರ್ಪಿಸಲಾಯಿತು.

ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು