ಕಲಬುರಗಿ: ರೈತ ಸಮುದಾಯಕ್ಕೆ ಅತಿ ಹತ್ತಿರವಾದ ಕಾರ ಹುಣ್ಣಿಮೆ ಅಂಗವಾಗಿ ಮಂಗಳವಾರ ಜಿಲ್ಲೆಯಾದ್ಯಂತ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳನ್ನು ಸಿಂಗರಿಸಿ, ಓಡಿಸಿ ಖುಷಿಪಟ್ಟರು.

ಬೆಳಿಗ್ಗೆಯಿಂದಲೇ ಎತ್ತುಗಳ ಮೈತೊಳೆದು, ಮೈಗೆ ಅರಿಶಿನ ಹಚ್ಚಿದರು. ಕೊಂಬುಗಳಿಗೆ ಬಣ್ಣ ಹಚ್ಚಿದರು. ಎತ್ತಿಗಳ ಬಾಯಿಗೆ ಗೊಟ್ಟಾ ಹಾಕಿದರು. ಮನೆಯಲ್ಲಿ ಹಬ್ಬಕ್ಕೆ ತಯಾರಿಸಿದ ಹೋಳಿಗೆಯನ್ನು ತಿನ್ನಿಸಿದರು.

ನಂತರ ಊರ ಅಗಸಿಯ ಬಳಿ ಎತ್ತುಗಳನ್ನು ತಂದು ಗ್ರಾಮಸ್ಥರ ಸಮ್ಮುಖದಲ್ಲಿ ಓಡಿಸಿ ಕರಿ ಹರಿಯುವ ಶಾಸ್ತ್ರವನ್ನು ಪೂರ್ಣಗೊಳಿಸಿ
ದರು. ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಕಾರು ಹುಣ್ಣಿಮೆ ಸಮಯದಲ್ಲಿ 2 ಬಂಡಿಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದತ್ತು ಪೂಜಾರಿ ಎಂಬುವರಿಗೆ ಗಾಯವಾಗಿದೆ. ₹ 1.80 ಲಕ್ಷ ವೆಚ್ಚದ ಜೋಡಿ ಎತ್ತುಗಳ ಕೊಂಬು ಮುರಿದಿದೆ. ಕಲಬುರಗಿಯ ಜಗತ್ ಬಡಾವಣೆಯಲ್ಲಿ ಕಾರಹುಣ್ಣಿಮೆ ಹಬ್ಬದ ನಿಮಿತ್ತ ಎತ್ತುಗಳನ್ನು ಸಿಂಗರಿಸಿ ಹಬ್ಬ ಆಚರಿಸಲಾಯಿತು.

ಕುಣಿದು ಸಂಭ್ರಮಿಸಿದ ಪಾಟೀಲದ್ವಯರು

ರಾಜಕೀಯವಾಗಿ ಎದುರಾಳಿಗಳಾದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭುಪಾಟೀಲಅವರು ಕಾರಹುಣ್ಣಿಮೆ ಅಂಗವಾಗಿ ಜಗತ್ ಬಡಾವಣೆಯಲ್ಲಿ ಆಯೋಜಿಸಿದ್ದ ಎತ್ತಿನ ಮೆರವಣಿಗೆ ವೇಳೆ ಪರಸ್ಪರ ಎದುರು ಬದುರು ನಿಂತು ಕುಣಿದು ಕುಪ್ಪಳಿಸಿದರು. ಬಡಾವಣೆಯ ಜನರೊಂದಿಗೆ ಫೋಟೊ ತೆಗೆಸಿಕೊಂಡರು.

ಪಾಲಿಕೆ ಸದಸ್ಯ ವಿಶಾಲ ನವರಂಗ, ಬಸವೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಗುಡ್ಡಾ, ಉಪಾಧ್ಯಕ್ಷ ಶರಣು ಅವಂಟಗಿ, ಪಾಲಿಕೆ ಮಾಜಿ ಸದಸ್ಯೆ ಜಗದೇವಿ ಸೋಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.