ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | 210 ಕೆಜಿ ತೂಕದ ಮೂಟೆ ಹೊತ್ತು 110 ಅಡಿ ನಡೆದ ನಡೆದ ಯುವಕ

Published 22 ಜೂನ್ 2024, 14:25 IST
Last Updated 22 ಜೂನ್ 2024, 14:25 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಭಾರ ಎತ್ತುವ ಸ್ಪರ್ಧೆ ಶನಿವಾರ ನಡೆಯಿತು.

ಗ್ರಾಮದ ಸಂತೋಷ ನಾಗಪ್ಪ ಜಾಡರ್ ಅವರು 210 ಕೆಜಿ ತೂಕದ ತೊಗರಿ ಧಾನ್ಯಗಳ ಮೂಟೆ ಹೊತ್ತು 110 ಅಡಿ ಹೆಜ್ಜೆ ಹಾಕಿ ಸಾಸಹ ಮೆರೆದರು. ನಿವೃತ್ತ ಶಿಕ್ಷಕ ಜಗನ್ನಾಥರಡ್ಡಿ ಪೊಂಗಾ ಅವರು ₹5ಸಾವಿರ ಬಹುಮಾನ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಯುವಕನ ಮೆರವಣಿಗೆ ಮಾಡಲಾಯಿತು.

ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮುಖಂಡರು ಸಾಹಸಿ ಸಾಧಕನಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಅಭಿನಂದಿಸಿದರು. ಶರಣು ಮೇದಾರ್, ಶರಣು ಸೋಲಾಪುರ, ಶಿವಶರಣಪ್ಪ ಹೂಗಾರ, ಆರೀಫ್ ಪಟೇಲ್, ಸತೀಶ ಮಾದೇಶಿ, ಹಾಫೀಜ್ ಸರದಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT