ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಿ, ಕಬ್ಬಲಿಗರ ಮತ ಪಡೆದು ಬಿಜೆಪಿ ವಂಚನೆ: ಲಚ್ಚಪ್ಪ ಜಮಾದಾರ

Published 7 ಮೇ 2023, 3:56 IST
Last Updated 7 ಮೇ 2023, 3:56 IST
ಅಕ್ಷರ ಗಾತ್ರ

ಕಲಬುರಗಿ: ‘ಕೋಲಿ, ಕಬ್ಬಲಿಗ ಇತರೆ ಪರ್ಯಾಯ ಪದಗಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ(ಎಸ್‌ಟಿ) ಸೇರ್ಪಡೆ ಮಾಡುವುದಾಗಿ ನಮ್ಮ ಮತ ಪಡೆದು ಬಿಜೆಪಿ ನಾಯಕರು ವಂಚಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ ಆರೋಪಿಸಿದರು.

‘ಕಳೆದ ಲೋಕಸಭೆ, ವಿಧಾನಸಭೆ, ಉಪಚುನಾವಣೆಯಲ್ಲಿ ಬಹಿರಂಗವಾಗಿ ಎಸ್‌ಟಿ ಸೇರ್ಪಡೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿಯಿಂದ ಹಿಡಿದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿ.ಎಂ ಬಿ.ಎಸ್‌.ವೈ ಯಡಿಯೂರಪ್ಪ, ಸಂಸದ ಡಾ.ಉಮೇಶ ಜಾಧವ ಅವರು ಭರವಸೆ ಕೊಟ್ಟಿ ದ್ದರು’ ಎಂದು ಶನಿವಾರ ‍ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

‘ನಮ್ಮದೆ ಸಮುದಾಯದ ಎನ್‌. ರವಿಕುಮಾರ ಅವರನ್ನು ಮುಂದಿಟ್ಟುಕೊಂಡು ನಮ್ಮ ಮತ ಪಡೆದಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿಗೆ ಮತ ಕೊಡಿ ಎಸ್‌ಟಿ ಸೇರ್ಪಡೆಯನ್ನು ರಕ್ತದಲ್ಲಿ ಬರೆದುಕೊಡುವುದಾಗಿ ರವಿಕುಮಾರ ಅವರು ಭರವಸೆ ಕೊಟ್ಟರು. ಇದನ್ನು ನಂಬಿ ಬಿಜೆಪಿಗೆ ಮತ ನೀಡಿದ್ದೇವೆ. 5 ವರ್ಷ ಕಳೆದರೂ ಎಸ್‌ಟಿ ಸೇರ್ಪಡೆ ಮಾಡಲಿಲ್ಲ. ವಿಧಾನಪರಿಷತ್ ಸದಸ್ಯರಾಗಿ ಸಧನದಲ್ಲಿ ಒಂದೇ ಒಂದು ಪ್ರಶ್ನೆ ಮಾಡಲಿಲ್ಲ. ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತರ ಬಗ್ಗೆ ಮಾತನಾಡಲಿಲ್ಲ. ಜನರಿಂದ ತಪ್ಪಿ ಸಿಕೊಂಡು ಓಡಾ ಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಕೋಲಿ, ಕಬ್ಬಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಲಬುರಗಿ ಉಸ್ತುವಾರಿಯಾಗಿ ರವಿಕುಮಾರ ಅವರು ಓಡಾಡುತ್ತಿದ್ದಾರೆ. ಯಾವ ಮುಖ ಇರಿಸಿಕೊಂಡು ಮತ ಕೇಳುತ್ತಿದ್ದಾರೆ, ಉಸ್ತುವಾರಿ ವಹಿಸಿಕೊಂಡಿದ್ದಾರೆ? ಎಸ್‌ಟಿ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದ ಸಚಿವ ಅರ್ಜುನ್ ಮುಂಡಾ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತ್ಯುತ್ತರ ಬಂದಿದೆ’ ಎಂದು ಅವರು ಹೇಳಿದರು.

‘ಕೋಲಿ, ಕಬ್ಬಲಿಗ ಇತರೆ ಸಮು ದಾಯಗಳಿಗೆ ಎಸ್‌ಟಿ ಸೇರ್ಪಡೆಯು ಪರಿಶೀಲನೆ ಹಂತದಲ್ಲಿದೆ ಎಂದಿದ್ದಾರೆ. ಮತ ಪಡೆಯಲು ಹುಸಿ ಭರವಸೆ ನೀಡಿ ವಂಚಿಸಿದ್ದಾರೆ’ ಎಂದು ಅವರು ಹೇಳಿದರು.

ಮುಖಂಡರಾದ ರಾಮಲಿಂಗ ನಾಟೇಕರ, ಬಸವರಾಜ ಚಿನ್ಮಳಿ, ಹಣ ಮಂತ ಸಂಕನೂರು, ರಾಮಲಿಂಗ ನಾಟೇಕರ, ಶಿವರಾಜ, ಶಿವು ದಣಿ, ಬಸವರಾಜ ಜಮಾದಾರ, ಮಲ್ಲಿಕಾರ್ಜುನ ಗುಡುಬಾ, ಶ್ರೀಮಾನ್ ಯರಗಾಲ್, ದೇವೇಂದ್ರ ಜಮಾದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT