ಜೇವರ್ಗಿ ತಾಲ್ಲೂಕಿನ ಕೋಬಾಳ ಗ್ರಾಮದಲ್ಲಿ ಭೀಮಾ ನದಿಯ ಪ್ರವಾಹ ಬಂದಿದ್ದರಿಂದ ಮನೆಗಳಲ್ಲಿದ್ದ ಜನರನ್ನು ಭಾನುವಾರ ದೋಣಿಯ ಮೂಲಕ ಕರೆತರಲಾಯಿತು
–ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಊರಿನ ಹಿರಿಯರು ಅಧಿಕಾರಿಗಳು ತಕ್ಷಣ ಅಲ್ಲಿಂದ ಹೊರಟುಬರುವಂತೆ ತಿಳಿಸಿದ್ದರಿಂದ ನಮ್ಮ ಬಟ್ಟೆಗಳನ್ನೂ ತೆಗೆದುಕೊಳ್ಳದೇ ಬಂದೆವು. ಹೀಗಾಗಿ ನಮಗೆ ಸ್ನಾನವೂ ಇಲ್ಲ. ಬಟ್ಟೆ ಬದಲಾಯಿಸಲು ಸೀರೆಗಳೂ ಇಲ್ಲ ಹಾಸಿಗೆ ಹೊದಿಕೆಯೂ ಇಲ್ಲದಂತಾಗಿದೆ.
ಸರಸ್ವತಿ ಮಾಳಬನೂರ ಮಂದರವಾಡ ಗ್ರಾಮಸ್ಥೆ
ಪ್ರತಿ ಸರ್ತಿ ಪ್ರವಾಹ ಬಂದಾಗಲೆಲ್ಲ ಊರಿನ 100ಕ್ಕೂ ಅಧಿಕ ಮನೆಗಳು ಮುಳುಗುತ್ತವೆ. ಶಾಲೆ ಅಂಗನವಾಡಿ ದೇವಸ್ಥಾನಗಳು ನೀರಿನಲ್ಲಿವೆ. ಊರಲ್ಲಿರುವವರಿಗೆ ರೋಗ ಬಂದರೂ ತಕ್ಷಣ ಕರೆದೊಯ್ಯಲು ಆಗಲ್ಲ ಸ್ಥಳಾಂತರವೊಂದೇ ಪರಿಹಾರ.
ಖಾಜಾ ಪಟೇಲ್ ಕೋಬಾಳ ಗ್ರಾಮಸ್ಥ
ಗ್ರಾಮದಲ್ಲೇ ಉಳಿದಿರುವವರಿಗೆ ಶುದ್ಧ ಕುಡಿಯುವ ನೀರು ಆಹಾರ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಕ್ಷಣ ಹೊರಟು ಬಂದವರಿಗೆ ವಿತರಿಸಲು 2500 ಸೀರೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ.