ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿಯಲ್ಲಿ ಧಾರಾಕಾರ ಮಳೆ: ಮನೆ, ಅಂಗಡಿಗಳಿಗೆ ನುಗ್ಗಿದ ನೀರು

Last Updated 14 ಅಕ್ಟೋಬರ್ 2022, 7:36 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಗುರುವಾರ ತಡರಾತ್ರಿ ಭಾರಿ‌ಮಳೆ ಸುರಿದಿದೆ. ಮಳೆಯಿಂದ ಚಿಂಚೋಳಿ ಪಟ್ಟಣದಲ್ಲಿಶ್ರೀಕಾಂತ ರೊಟ್ಟಿ, ಶ್ರೀಮಂತ ರೊಟ್ಟಿ, ಶಾಂತಕುಮಾರ ರೊಟ್ಟಿ ಅವರ ದಿನಸಿ ಅಂಗಡಿ ಹಾಗೂ ಚಪ್ಪಲಿ ಅಂಗಡಿಗಳಲ್ಲಿ ನೀರು ನುಗ್ಗಿದೆ.

ಇದರಿಂದ ಅಕ್ಕಿ, ಸಕ್ಕರೆ, ಬೇಳೆ ಹಾಗೂ ಚಪ್ಪಲಿಗಳು ಮಳೆಯಿಂದ ಹಾಳಾಗಿವೆ. ತಾಲ್ಲೂಕಿನ ಬೆನಕನಳ್ಳಿ, ರಾಯಕೋಡ ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ.

ಪುರಸಭೆ ವ್ಯಾಪ್ತಿಯ ಚಂದಾಪುರದ ಆಶ್ರಯ ಕಾಲೊನಿ ಮತ್ತು ಪಟೇಲ್ ಕಾಲೊನಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ವರದಿಗಳಿವೆ ಎಂದು ತಹಶೀಲ್ದಾರ್ ಅಂಜುಮ್ ತಬಸ್ಸುಮ್ 'ಪ್ರಜಾವಾಣಿ'ಗೆ ತಿಳಿಸಿದರು.

ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ವರದಿ ಸಲ್ಲಿಸುವಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ತಾಲ್ಲೂಕಿನಲ್ಲಿ ಸುರಿದ ಜಡಿ‌ಮಳೆಯಿಂದ ನಾಗರಾಳ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. 575 ಕ್ಯುಸೆಕ್ ಒಳಹರಿವಿದ್ದು, 1165 ಕ್ಯುಸೆಕ್ ನೀರು ಗೇಟು ಎತ್ತಿ ನದಿಗೆ ಬಿಡಲಾಗಿದೆ ಎಂದು ಯೋಜನಾಧಿಕಾರಿ ಹಣಮಂತ ಪೂಜಾರಿ ತಿಳಿಸಿದರು.

ಮುಳುಗಿದ ಬ್ಯಾರೇಜ್, ಸಂಪರ್ಕ ಕಡಿತ: ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ಸೇತುವೆಗಳು ಹಾಗೂ ಬ್ಯಾರೇಜುಗಳು ಮುಳುಗಿವೆ.

ತಾಲ್ಲೂಕಿನ ತಾಜಲಾಪುರ, ಗಾರಂಪಳ್ಳಿ, ಸೇತುವೆ ಮುಳುಗಿದರೆ, ಕನಕಪುರ ಚಂದಾಪುರ ಬ್ರಿಜ್ ಕಂ ಬ್ಯಾರೇಜು ಮುಳುಗಿ ಸಂಪರ್ಕ ಕಡಿತವಾಗಿವೆ ಎಂದು ಕನಕಪುರದ ಸಾಮಾಜಿಕ ಕಾರ್ಯಕರ್ತ ಶ್ರೀಧರ ವಗ್ಗಿ ತಿಳಿಸಿದರು.

ಸೋಯಾ ಬೆಳೆಗಾರರಿಗೆ ಸಂಕಷ್ಟ: ತಾಲ್ಲೂಕಿನ ಭಾರಿ ಮಳೆಯಿಂದ ಕೊಯ್ಲಿಗೆ ಬಂದ ಸೊಇಯಾ ಬೆಳೆಯ ರಾಶಿಗೆ ಮಳೆ ಅಡ್ಡಿಯಾಗಿದೆ. ಈಗಾಗಲೇ ಅಧಿಕ ಮಳೆ, ತೇವಾಂಶದಿಂದ ಸೋಯಾ ಬೆಳೆಯ ಬೇರು ಕೊಳೆತಿವೆ. ಇದರಿಂದ ಕಾಳುಗಳ ಗಾತ್ರದಲ್ಲಿ ಕುಸಿತ ಕಾಣಿಸಿದೆ. ಈಗ ಅಳಿದುಳಿದ ಸೋಯಾ ರಾಶಿ ಮಾಡಿ ಕೈಗೆತ್ತಿಕೊಳ್ಳಲು ಮುಂದಾದರೆ, ಅದಕ್ಕೂ ಮಳೆರಾಯ ಕೊಕ್ಕೆ ಹಾಕಿದ್ದಾನೆ. ಬಹುತೇಕ ಸೊಯಾ ಬೆಳೆ ಮಳೆಯ ನೀರಿನಲ್ಲಿ ನಿಂತಿದೆ ಎಂದು ಪ್ರಗತಿಪರ ರೈತ ಬಾಬುರಾವ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT