ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್, ರಸಗೊಬ್ಬರ ಕೇಳಿದ ರೈತರೊಂದಿಗೆ ಖೂಬಾ ಉಡಾಫೆ ವರ್ತನೆ: ಸಾಗರ್ ಖಂಡ್ರೆ

Published 18 ಏಪ್ರಿಲ್ 2024, 16:30 IST
Last Updated 18 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ಚಿಂಚೋಳಿ: ‘ಸಚಿವ ಖೂಬಾ ಅವರಿಗೆ ರೈತನೊಬ್ಬ ಕರೆ ಮಾಡಿ ವಿದ್ಯುತ್ ಕೊಡಿಸಿ ಎಂದರೆ ನನ್ನ ಕಾರಿನ ಡಿಕ್ಕಿಯಲ್ಲಿದೆ ಒಯ್ಯಿರಿ ಎಂದಿದ್ದಲ್ಲದೇ, ರಸಗೊಬ್ಬರ ಕೇಳಿದ ರೈತ ಹಾಗೂ ಸರ್ಕಾರಿ ನೌಕರನೊಂದಿಗೆ ಉಡಾಫೆಯಿಂದ ವರ್ತಿಸಿ ಆತನನ್ನು ಅಮಾನತು ಮಾಡಿಸಿದರು. ಅವರಿಗೆ ರೈತರ ಮತ ಕೇಳುವ ನೈತಿಕತೆಯಿಲ್ಲ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಹೇಳಿದರು.

ಬೀದರ್ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಚಿಂಚೋಳಿ ತಾಲ್ಲೂಕಿನ ಐನೋಳ್ಳಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಕೇಂದ್ರ ಸಚಿವ ಭಗವಂತ ಖೂಬಾಗೆ ರೈತರ ಬಗ್ಗೆ ಕಾಳಜಿಯಿಲ್ಲ. ಅವರು ಬೇರೆಯೊಬ್ಬರ ಹೆಸರಲ್ಲಿ ಎರಡು ಚುನಾವಣೆ ಗೆದ್ದಿದ್ದಾರೆ. ಈಗಲೂ ಅದೇ ತವಕದಲ್ಲಿದ್ದಾರೆ ಹೀಗಾಗಿ ನೀವು ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ, ಮಾಜಿ ಶಾಸಕ ಕೈಲಾಸ ವೀರೇಂದ್ರ ಪಾಟೀಲ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ಬಾಬುರಾವ್ ಪಾಟೀಲ, ಲಕ್ಷ್ಮಣ ಆವುಂಟಿ, ಲಕ್ಷ್ಮಿ ಮಂಜುನಾಥ ಕೊರವಿ, ಆನಂದ ಟೈಗರ್ ಮಾತನಾಡಿದರು.

ಸುರೇಶ ಬಂಟಾ, ಮಹಿಮೂದ್ ಪಟೇಲ್, ಬಸವರಾಜ ಮಾಲಿ, ಅಜೀತ ಪಾಟೀಲ, ಸಂತೋಷ ಗುತ್ತೇದಾರ, ವೀರಶೆಟ್ಟಿ ಪಾಟೀಲ ನಾಗಾಈದಲಾಯಿ, ಬಕ್ಕಪ್ಪ ಕಾಮಣಿ, ಅಲ್ಲಾವುದ್ದಿನ್ ಅನ್ಸಾರಿ, ರಾಜು ಮಂದಾ, ಮಶಾಖ ಲಕಪತಿ, ಇಬ್ರಾಹಿಂಸಾಬ್ ದೇಗಲಮಡಿ, ವಿಜಯಕುಮಾರ ರೊಟ್ಟಿ, ಶರಣು ಪಪ್ಪಾ ಮೊದಲಾದವರು ಉಪಸ್ಥಿತರಿದ್ದರು.

Quote - ವಿಧಾನಸಭೆ ಚುನಾವಣೆಯಲ್ಲಿ ವಾಗ್ದಾನ ಮಾಡಿದಂತೆ 5 ಗ್ಯಾರಂಟಿ ಜಾರಿ ಮಾಡಿದೆ. ಈಗ ಕೇಂದ್ರದಲ್ಲಿ ಅಧಿಕಾರ ಕೊಡಿ 25 ಗ್ಯಾರಂಟಿ ಜಾರಿಯಾಗುತ್ತವೆ ಕೈಲಾಸ ವೀರೇಂದ್ರ ಪಾಟೀಲ ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT