ಮಂಗಳವಾರ, ಸೆಪ್ಟೆಂಬರ್ 28, 2021
22 °C
ಕಲಬುರ್ಗಿಯ ಅಂದಾನಿ ಕಲಾ ಗ್ಯಾಲರಿಯಲ್ಲಿ ಕೃತಿ ಬಿಡುಗಡೆ

ಕಲಬುರ್ಗಿ: ಕಲಾವಿದ ಸರೋದೆ ಕಲಾಕೃತಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಹಿರಿಯ ಚಿತ್ರ ಕಲಾವಿದ ಕಿಶನರಾವ್ ಸರೋದೆ ಅವರ ಜನ್ಮದಿನದ ಅಂಗವಾಗಿ ನಗರದ ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆ, ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಅವರ ಕುರಿತಾದ ಪುಸ್ತಕ ಲೋಕಾರ್ಪಣೆ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಮಂಗಳವಾರ ಆಯೋಜಿಸಲಾಗಿತ್ತು.

ಪುಸ್ತಕ ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ’ಕಿಶನರಾವ್ ಸರೋದೆ ಅವರ ಬದುಕು, ಚಿತ್ರಕಲೆ ಅನನ್ಯವಾದದ್ದು ಕಲಾವಿದರಿಗೆ ಪ್ರೇರಣಾದಾಯಕವಾಗಿದೆ. ಸರೋದೆ ಅವರಂಥ ಹಿರಿಯ ಕಲಾವಿದರು ನಮ್ಮ ಮಧ್ಯೆ ಇರುವುದು ಅಪರೂಪವಾಗಿದ್ದು, ಯುವಕರು ಅವರ ಅನುಭವಗಳಿಂದ ಮಾರ್ಗದರ್ಶನ ಪಡೆಯಬೇಕು‘ ಎಂದರು.

ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಮಾತಾನಾಡಿ, ’ಕಲಾವಿದರ ಕುರಿತಾದ ಪುಸ್ತಕಗಳು ಯುವಕರಿಗೆ ಪ್ರೋತ್ಸಾಹ ನೀಡುತ್ತದೆ. ಕಲೆ ಸಾಹಿತ್ಯಕ್ಕೆ ಇಂದು ತುಂಬಾ ಮಹತ್ವವಿದೆ‘ ಎಂದು ಹೇಳಿದರು.

ಕೃತಿ ಲೇಖಕ ಅರವಿಂದ ಟೊಣಪೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆನಾರ್ಧನ ಪಾಣಿಭಾತೆ ಪ್ರಾರ್ಥಿಸಿದರು. ವ್ಯಂಗ್ಯ ಚಿತ್ರಕಲಾವಿದ ಎಂ. ಸಂಜೀವ ನಿರೂಪಿಸಿ ವಂದಿಸಿದರು.

ಬಸವಸರಾಜ ಉಪ್ಪಿನ, ಡಾ ಎ.ಎಸ್.ಪಾಟೀಲ, ಮಲ್ಲಿಕಾರ್ಜುನ ಕೋರವಾರ, ಬಸವರಾಜ ಜಾನೆ, ವಿ.ಬಿ. ಬಿರಾದಾರ, ಈರಣ್ಣಾ ಕಂಬಾರ, ಡಾ ಎಸ್. ನೀಲಾ, ಮಹ್ಮದ ಅಯಾಜುದ್ದೀನ್ ಪಟೇಲ್, ಲಕ್ಷ್ಮಿಕಾಂತ ಮನೋಕರ, ಡಾ.ರೆಹಮಾನ ಪಟೇಲ್, ರೇವಣಸಿದ್ದಪ್ಪ ಹೊಟ್ಟಿ, ನಿಂಗಣ್ಣ ಕೇರಿ, ಬಸವರಾಜ ಕಮಾಜಿ, ಬಿ.ಎಂ.ರಾವುರ, ಸಿ.ಎಸ್. ಮಾಲೀಪಾಟೀಲ ಇದ್ದರು.

ಚಿತ್ರಕಲಾ ಪ್ರದರ್ಶನ ಅಗಸ್ಟ್ 10ರಿಂದ 12ರವರೆಗೆ, ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ಚಿತ್ರಕಲಾವಿದರು ಮತ್ತು ಕಲಾ ಆಸಕ್ತರು, ಸಾರ್ವಜನಿಕರು ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು