ಜಿಲ್ಲಾ ಉಸ್ತುವಾರಿ ಸಚಿವರ ಸ್ಪಂದನೆಗೆ ವಿನಂತಿ
ಕಲಬುರಗಿ ಜಿಲ್ಲೆ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಇಲಾಖೆಯ ಅಧೀನದಲ್ಲೇ ಕೆಆರ್‌ಐಡಿಎಲ್ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಅವ್ಯವಹಾರದ ಕುರಿತು ಈಗಾಗಲೇ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ನಾವು ಮತ್ತೊಮ್ಮೆ ಪತ್ರ ಬರೆದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಈ ಎರಡು ಏಜೆನ್ಸಿಗಳ ವಿರುದ್ದ ಜೆಡಿಎಸ್ ಪಕ್ಷ ವತಿಯಿಂದ ಬೃಹತ ಮಟ್ಟದ ಹೋರಾಟ ಆಯೋಜಿಸಲಾಗುವುದು ಎಂದು ಶಿವಕುಮಾರ ನಾಟೀಕಾರ ಆಕ್ರೋಶ ವ್ಯಕ್ತಪಡಿಸಿದರು.