ಹಾರ್ಟ್‌ಲೈನ್ ಯೋಜನೆಯ ಯಶಸ್ಸು ಆಧರಿಸಿ ಭವಿಷ್ಯದಲ್ಲಿ ಈ ಸೇವೆಯನ್ನು ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟಕ್ಕೆ ವಿಸ್ತರಿಸುವ ಗುರಿಯಿದೆ
ಡಾ.ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
‘ಹಬ್ ಅಂಡ್ ಸ್ಫೋಕ್ಸ್’
ಮಾದರಿ ಕೆಲಸ’ ‘ಕೆಕೆಆರ್‌ಡಿಬಿ ಹಾರ್ಟ್‌ಲೈನ್ ಯೋಜನೆಯು ಹಬ್ ಅಂಡ್ ಸ್ಫೋಕ್ ಮಾದರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯಿಲ್ಲ. ‘108’ಗೆ ಕರೆ ಮಾಡಿದರೆ ಸಾಕು ಅದು ಬೆಂಗಳೂರಿನ ಕೇಂದ್ರ ಕಚೇರಿಗೆ ರವಾನೆಯಾಗುತ್ತದೆ. ಅಲ್ಲಿ ಹೃದ್ರೋಗ ಸಮಸ್ಯೆಯ ತೀವ್ರತೆಯ ಆಧಾರದಲ್ಲಿ ಕ್ರಿಟಿಕಲ್ ಮಾಡರೇಟ್ ಹಾಗೂ ಸಬ್ ಸ್ಟೇಬಲ್ ವಿಭಾಗಗಳಾಗಿ ವಿಂಗಡಿಸಿ ಚಿಕಿತ್ಸೆಗೆ ಮಾರ್ಗದರ್ಶನ ನೀಡುತ್ತಾರೆ’ ಎಂದು ಡಾ.ಅಜಯ್ ಸಿಂಗ್ ವಿವರಿಸಿದರು. ‘100ರಿಂದ 120 ಕಿ.ಮೀ ವ್ಯಾಪ್ತಿಯಲ್ಲಿ ಆಂಬುಲೆನ್ಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಕಲಬುರಗಿ ಬೀದರ್ ಯಾದಗಿರಿ ರಾಯಚೂರಿನ ಆಂಬುಲೆನ್ಸ್‌ಗಳಿಗೆ ಕಲಬುರಗಿ ಜಯದೇವ ಆಸ್ಪತ್ರೆ ಹಬ್ ಆಗಿರಲಿದೆ. ಅಂತೆಯೇ ಕೊಪ್ಪಳ ಜಿಲ್ಲೆಗೆ ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ ವಿಜಯನಗರ ಬಳ್ಳಾರಿಗೆ ಬಳ್ಳಾರಿ ಆಸ್ಪತ್ರೆ ಚಿಕಿತ್ಸಾ ಹಬ್ ಆಗಿರಲಿದೆ’ ಎಂದು ಮಾಹಿತಿ ನೀಡಿದರು.