ಕಲಬುರಗಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ಗಳ ಓಡಾಟ ಬಹುತೇಕ ಸ್ತಬ್ಧ ಸ್ತಬ್ಧಗೊಂಡಿದೆ.

ನಗರದಿಂದ ವಿವಿಧೆಡೆ ಹೋಗಬೇಕಿದ್ದ ನೂರಾರು ಬಸ್ಗಳ ಪೈಕಿ ಕೆಲವೇ ಕೆಲವು ಬಸ್ಗಳು ಸಂಚರಿಸಿದವು. ಬಸ್ ಚಾಲಕರು ಬಸ್ಗಳ ಮಾರ್ಗದ ಬೋರ್ಡ್ ತೆಗೆದು ಸಂಚರಿಸಿದವು. ಆದರೆ, ಸಾಮಾನ್ಯ ದಿನಗಳಲ್ಲಿ ಇದ್ದಂತೆ ಬಸ್ ನಿಲ್ದಾಣದಲ್ಲಿ ಬಸ್ ಗಳು ಸಾಲುಗಟ್ಟಿಲ್ಲ. ಬಸ್ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವು ಪ್ರಯಾಣಿಕರು ಬಸ್ ಇಲ್ಲದ್ದರಿಂದ ಖಾಸಗಿ ವಾಹನ ಗಳ ಮೊರೆ ಹೋದರೆ, ಮತ್ತೆ ಕೆಲವರು ಮನೆಗಳತ್ತ ಹೆಜ್ಜೆ ಹಾಕಿದರು.

ಖಾಸಗಿ ಬಸ್ಗಳನ್ನು ನಿಲ್ದಾಣ ಒಳಗೆ ಕರೆಯಿಸಿ ವಿಜಯಪುರ, ಬೀದರ್ಗೆ ಹೋಗಲು ಕಾಯುತ್ತಿದ್ದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದರು.

ಬಸ್ಗಳು ಇಲ್ಲದ್ದರಿಂದ ಪ್ರಯಾಣಿಕರು ಪರದಾಡಿದರು.

'ಬೆಂಗಳೂರಿನಿಂದ ಕಲಬುರಗಿಗೆ ಬಸ್ ನಲ್ಲಿ ಕುಟುಂಬ ಸಮೇತ ಬಂದೆ. ಇಲ್ಲಿಂದ ಕಮಲಾಪುರಕ್ಕೆ ಹೋಗಬೇಕು. ಆದರೆ ಎರಡು ಗಂಟೆ ಕಾದರೂ ಒಂದೂ ಬಸ್ ಇಲ್ಲ. ಬಸ್ ಮುಷ್ಕರದ ಬಗೆಗೆ ಗೊತ್ತಿರಲಿಲ್ಲ. ಖಾಸಗಿ ವಾಹನವೋ ಆಟೊವೋ ಸಿಗುತ್ತಾ ಎಂದು ಹುಡುಕುತ್ತಿದ್ದಿರುವೆ’ ಎಂದು ಬೆಂಗಳೂರಿನಿಂದ ಬಂದಿದ್ದ ಆಕಾಶ ಹೇಳಿದರು.

'ಕಲಬುರಗಿಯಿಂದ ಮೆಹಬೂಬ್ ನಗರಕ್ಕೆ ಹೋಗಲು ಬೆಳಿಗ್ಗೆಯೇ ಬಂದಿರುವೆ. ಎರಡು ಗಂಟೆ ಕಾದರೂ ಬಸ್ ಇಲ್ಲ. ನಮಗೆ ಮುಷ್ಕರ ಮಾಹಿತಿ ಇರಲಿಲ್ಲ. ಹೀಗಾಗಿ ಪರದಾಡುವಂತಾಗಿದೆ' ಎಂದು ಪ್ರಯಾಣಿಕ ಸೈಯದ್ ವಹೀದ್ ಪ್ರತಿಕ್ರಿಯಿಸಿದರು.

ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಭೇಟಿ ನೀಡಿ ಮುಷ್ಕರದ ಬಗ್ಗೆ ಪರಿಸ್ಥಿತಿ ಅವಲೋಕಿಸಿದರು.

ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2ರ ಅಧಿಕಾರಿ ಎಸ್.ಜಿ.ಗಂಗಾಧರ ಮಾತನಾಡಿ, 'ಮುಷ್ಕರ ನಿರತ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಲಾಗಿದೆ. ನಮ್ಮ ವಿಭಾಗದಲ್ಲಿ ಒಟ್ಟು ಐದು ಡಿಪೊಗಳಿದ್ದು, ಬೆಳಿಗ್ಗೆ ಎಂಟು ಗಂಟೆ ತನಕ 250ಕ್ಕೂ ಅಧಿಕ ಬಸ್ಗಳು ಸಂಚರಿಸುತ್ತಿದ್ದವು. ಆದರೆ ಈತನಕ ಕೇವಲ 20ರಿಂದ 25 ಬಸ್ಗಳು ಮಾತ್ರವೇ ಸಂಚರಿಸಿವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.