ಕಲಬುರಗಿ: ನಗರಕ್ಕೆ ನೀರು ಸರಬರಾಜಾಗುವ ಬೋಸಗಾ ಕೆರೆಯ ಪ್ರದೇಶದಲ್ಲಿ ಎಲ್ ಅಂಡ್ ಟಿ ಕಂಪನಿ ಸಿಬ್ಬಂದಿ ಕಸವನ್ನು ತೆರವುಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರು.

ಕೈಯಲ್ಲಿ ಪೊರಕೆ, ಸಲಿಕೆ, ಬುಟ್ಟಿಗಳನ್ನು ಹಿಡಿದು, ಕಾಲಿನಲ್ಲಿ ಬೂಟು, ಕೈಗವಸು, ಮುಖಗವಸು ಧರಿಸಿದ್ದ ಸಿಬ್ಬಂದಿ ಬೋಸಗಾ ಕೆರೆ ಮತ್ತು ಜಲಾನಾಯನ ಪ್ರದೇಶದಲ್ಲಿ ಬಿದ್ದಿರುವ ಕಸ, ಕಂಟಿ, ಎಲೆ, ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು, ಕಪ್ಪು ಪ್ಲಾಸ್ಟಿಕ್ನಲ್ಲಿ ಸಂಗ್ರಹಿಸಿ ಸ್ಥಳಾಂತರಿಸಿದರು. 500 ಕೆಜಿ ಹಸಿ ತ್ಯಾಜ್ಯ ಹಾಗೂ 700 ಕೆ.ಜಿ. ಒಣ ತ್ಯಾಜ್ಯ ಸಂಗ್ರಹಿಸಿ ಕಂಪನಿಯ ಲಾರಿಯ ಮೂಲಕ ವಿಲೇವಾರಿ ಮಾಡಿದರು.

ಕಂಪನಿ ಪ್ರಧಾನ ವ್ಯವಸ್ಥಾಪಕ ಕುಮಾರೇಶನ್ ಸೇತುರಾಜ್ ಮಾತನಾಡಿ, ‘6 ತಿಂಗಳಿಗೊಮ್ಮೆ ಬೋಸಗಾ ಕೆರೆಯ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.