ಲಿಫ್ಟ್‌ಗೆ ಸಿಲುಕಿದ ಮಗು; ತಾಯಿ ಕಣ್ಣೆದುರಿನಲ್ಲೇ ದುರ್ಮರಣ

ಶುಕ್ರವಾರ, ಜೂಲೈ 19, 2019
24 °C

ಲಿಫ್ಟ್‌ಗೆ ಸಿಲುಕಿದ ಮಗು; ತಾಯಿ ಕಣ್ಣೆದುರಿನಲ್ಲೇ ದುರ್ಮರಣ

Published:
Updated:

ಬೆಂಗಳೂರು: ಆಟವಾಡುತ್ತಿದ್ದ ನಾಲ್ಕು ವರ್ಷದ ಮಗ ತಾಯಿಯ ಕಣ್ಣೆದುರಿನಲ್ಲೇ ಲಿಫ್ಟ್ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೈಯಪ್ಪನಹಳ್ಳಿ ಸಮೀಪದ ಕಗ್ಗದಾಸಪುರದಲ್ಲಿ ನಡೆದಿದೆ.

ಕಗ್ಗದಾಸಪುರ 9ನೇ ಅಡ್ಡರಸ್ತೆಯ ನಿವಾಸಿ ದಯಾ ಬಹದ್ದೂರ್ ಖತ್ರಿ ಹಾಗೂ ಕಮಲಾ ಖತ್ರಿ ದಂಪತಿಯ ಮಗ ಸಂಜಯ್ ಮೃತ ಬಾಲಕ.

ಸ್ಥಳೀಯ ಅಪಾರ್ಟ್‌ಮೆಂಟ್‌ನಲ್ಲಿ ದಯಾ ಬಹದ್ದೂರ್ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಕಮಲಾ ಗೃಹಿಣಿ. ದಂಪತಿಗೆ ಉಳಿದುಕೊಳ್ಳಲು ಅಪಾರ್ಟ್‌ಮೆಂಟ್‌ನ ಮಾಲೀಕರು ನೆಲಮಹಡಿಯಲ್ಲಿ ಕೊಠಡಿ ನೀಡಿದ್ದಾರೆ. ಪುತ್ರನ ಜೊತೆ ದಂಪತಿ ನೆಲೆಸಿದ್ದರು.

ಕೊಠಡಿ ಸಮೀಪದಲ್ಲೇ ಲಿಫ್ಟ್ ಇದ್ದು, ಸೋಮವಾರ ಸಂಜೆ 5.30ರ ಸುಮಾರಿಗೆ ಲಿಫ್ಟ್ ಬಳಿ ಸಂಜಯ್‌ ಆಟವಾಡುತ್ತಿದ್ದ. ಮಗ ಬಳಿಯಲ್ಲೇ ಕಮಲಾ ಕೂಡಾ ಇದ್ದರು. ಲಿಫ್ಟ್ ಮೇಲೆ ಹೋಗುತ್ತಿದ್ದಂತೆ ಸಂಜಯ್ ಆಯತಪ್ಪಿ ಲಿಫ್ಟ್‌ನ ಬಾಗಿಲಿನ ಬಳಿಯಿದ್ದ ಸಣ್ಣ ಜಾಗದಲ್ಲಿನ ಐದು ಅಡಿ ಆಳಕ್ಕೆ ಬಿದ್ದಿದ್ದ. ತಕ್ಷಣ ಮಗನನ್ನು ಮೇಲೆತ್ತಲು ತಾಯಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.

ತಕ್ಷಣ ತಾಯಿ ಜೋರಾಗಿ ಕೂಗಿಕೊಂಡಾಗ ಅಪಾರ್ಟ್‌ಮೆಂಟ್‌ ಎದುರು ನಿಂತಿದ್ದ ಪತಿ ಮತ್ತು ಅಕ್ಕ‍ಪಕ್ಕದವರು ಸ್ಥಳಕ್ಕೆ ಬಂದಿದ್ದಾರೆ. ಮೇಲೆ ಹೋಗಿದ್ದ ಲಿಫ್ಟ್ ಅಷ್ಟರಲ್ಲಿ ಕೆಳಗೆ ಬಂದಿದ್ದು, ಸಂಜಯ್‌ ಅದರ ಅಡಿಯಲ್ಲಿ ಸಿಲುಕಿದ್ದ. ಲಿಫ್ಟ್‌ ಅನ್ನು ಮತ್ತೆ ಮೇಲಕ್ಕೆ ಕಳುಹಿಸಿ ಹೊರಗೆ ತೆಗೆಯುವಷ್ಟರಲ್ಲಿ ಸಂಜಯ್‌ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದರು.

ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 5

  Sad
 • 0

  Frustrated
 • 3

  Angry

Comments:

0 comments

Write the first review for this !