ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಕಾಂಡ ಕೊರಕ: ಒಣಗಿದ ಮಾವು

ಒಂದೂವರೆ ದಶಕದ ಮಾವಿನ ಮರಗಳು; ವಾರ್ಷಿಕ ₹4 ಲಕ್ಷ ನಷ್ಟ
Published 12 ಆಗಸ್ಟ್ 2024, 7:08 IST
Last Updated 12 ಆಗಸ್ಟ್ 2024, 7:08 IST
ಅಕ್ಷರ ಗಾತ್ರ

ಚಿಂಚೋಳಿ: ಕಾಂಡ ಕೊರಕ ಹುಳುವಿನ ಬಾಧೆಯಿಂದ 280ಕ್ಕೂ ಹೆಚ್ಚು ಮಾವಿನ ಗಿಡಗಳು ಒಣಗಿ ನಿಂತಿದ್ದು, ಬೆಳೆಗಾರನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ತಾಲ್ಲೂಕಿನ ಯಲಕಪಳ್ಳಿ ಗ್ರಾಮದ ರೈತ ಸಂತೋಷ ಖತಲಪ್ಪ ತಿಗಡಿ ಅವರ ತೋಟದಲ್ಲಿ ಬೆಳೆಸಿದ ಒಂದೂವರೆ ದಶಕದ ಮಾವಿನ ಗಿಡಗಳು ಒಣಗಿ ನಿಂತಿವೆ.

ಹಚ್ಚ ಹಸಿರಾಗಿ ನಳನಳಿಸಬೇಕಾದ ತೋಟದಲ್ಲಿ ಮಾವಿನ ಗಿಡಗಳು ಕಾಂಡ ಕೊರಕ ಹುಳು ಬಾಧೆಗೆ ತುತ್ತಾಗಿದ್ದರಿಂದ ಬರಡು ಬರಡಾಗಿ ಗೋಚರಿಸುತ್ತಿವೆ.

ಸುಮಾರು 3 ಎಕರೆ ತೋಟದಲ್ಲಿ ಬೆಳೆಸಿದ 280ಕ್ಕೂ ಹೆಚ್ಚಿನ ಮಾವಿನ ಮರಗಳ ಪೈಕಿ ಬೆರಳೆಣಿಕೆಯಷ್ಟು ಮರಗಳು ಮಾತ್ರ ಬದುಕುಳಿದಿವೆ.

ಮಾವಿನ ಫಸಲಿನಿಂದ ಪ್ರತಿವರ್ಷ ₹4ಲಕ್ಷ ಆದಾಯ ಪಡೆಯುತ್ತಿದ್ದ ಬೆಳೆಗಾರನಿಗೆ ಆದಾಯದ ಮೂಲ ನಿಂತು ಹೋಗುವ ಮೂಲಕ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಬೆಳೆಗಾರ ಕಣ್ಣೀರು ಹಾಕುವಂತಾಗಿದೆ.

ತೋಟದಲ್ಲಿ ಬೆಳೆಸಿದ ಕೇಸರ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನ ಗಿಡಗಳು ಕಾಂಡ ಕೊರಕ ಹುಳುವಿಗೆ ಬಲಿಯಾಗಿವೆ. ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಮನವಿ ಮಾಡಿದ್ದಾರೆ.

ತೋಟಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಸುರೇಶರಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಗಿಡಗಳು ಸಂಪೂರ್ಣ ಒಣಗಿದ್ದರಿಂದ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದಿದ್ದಾರೆ.

ಕಾಂಡ ಕೊರಕ ಹುಳು ಮಾವಿನ ಗಿಡಕ್ಕೆ ನೀರು ಮತ್ತು ಆಹಾರ ಪೂರೈಕೆಯಾಗದಂತೆ ಮಾಡುತ್ತವೆ ಇದರಿಂದ ಗಿಡಗಳು ಒಣಗುತ್ತವೆ. ಆರಂಭದಲ್ಲಿಯೇ ಬೆಳೆಗಾರರು ಅಧಿಕಾರಿಗಳ ಮತ್ತು ವಿಜ್ಞಾನಿಗಳ ಗಮನಕ್ಕೆ ತಂದರೆ ಸಲಹೆ ನೀಡಲು ಸಾಧ್ಯವಿತ್ತು. ಆದರೆ ಈಗ ಯಾವ ಸಲಹೆಯೂ ಪ್ರಯೋಜನಕ್ಕೆ ಬಾರದು ಎಂದಿದ್ದಾರೆ.

ರಾಜಕುಮಾರ ಗೋವಿನ್ ಸಹಾಯಕ ನಿರ್ದೆಶಕರು ತೋಟಗಾರಿಕೆ ಇಲಾಖೆ ಚಿಂಚೋಳಿ
ರಾಜಕುಮಾರ ಗೋವಿನ್ ಸಹಾಯಕ ನಿರ್ದೆಶಕರು ತೋಟಗಾರಿಕೆ ಇಲಾಖೆ ಚಿಂಚೋಳಿ
ಸಂತೋಷ ಖತಲಪ್ಪ ತಿಗಡಿ ಮಾವು ಬೆಳೆಗಾರ ಯಲಕಪಳ್ಳಿ
ಸಂತೋಷ ಖತಲಪ್ಪ ತಿಗಡಿ ಮಾವು ಬೆಳೆಗಾರ ಯಲಕಪಳ್ಳಿ

ಮಾವಿನ ಮರಗಳು ಚೆನ್ನಾಗಿ ಬೆಳೆದಿದ್ದವು. ಪ್ರತಿವರ್ಷ ಫಸಲಿನ ಪ್ರಮಾಣ ಹೆಚ್ಚಾಗುತ್ತಿತ್ತು ಆದರೆ ಒಂದೇ ತಿಂಗಳಲ್ಲಿ ತೋಟದಲ್ಲಿನ ಎಲ್ಲಾ ಮರಗಳು ಒಣಗಿ ನಿಂತಿವೆ

-ಸಂತೋಷ ಖತಲಪ್ಪ ತಿಗಡಿ ಮಾವು ಬೆಳೆಗಾರ ಯಲಕಪಳ್ಳಿ

ಮಾವಿನ ಮರಗಳು ಒಣಗುತ್ತಿರುವುದು ಗಮನಕ್ಕೆ ಬಂದ ತಕ್ಷಣ ತೋಟಗಾರಿಕೆ ಅಧಿಕಾರಿ ಕಳುಹಿಸಿದ್ದೇವೆ ಆದರೆ ಅಷ್ಟರಲ್ಲಿ ಮರಗಳು ಸಂಪೂರ್ಣ ಒಣಗಿದ್ದವು

-ರಾಜಕುಮಾರ ಗೋವಿನ್ ಸಹಾಯಕ ನಿರ್ದೆಶಕರು ತೋಟಗಾರಿಕೆ ಇಲಾಖೆ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT