ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಮಲಬಾರ್‌ ನವೀಕೃತ ಮಳಿಗೆ ಉದ್ಘಾಟನೆ

Published 3 ಫೆಬ್ರುವರಿ 2024, 15:57 IST
Last Updated 3 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ಕಲಬುರಗಿ: ಬೀದರ್‌ ನಗರದ ಉದಗೀರ್ ರಸ್ತೆಯ ಅಕ್ಕಮಹಾದೇವಿ ಕಾಲೇಜಿನ ಎದುರಿನಲ್ಲಿ ಇರುವ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ನ ನವೀಕೃತ ಮಳಿಗೆಯನ್ನು ಶನಿವಾರ ಪರಿಸರ ಸಚಿವ ಈಶ್ವರ್‌ ಖಂಡ್ರೆ, ‍ಪೌರಾಡಳಿತ ಸಚಿವ ರಹೀಂ ಖಾನ್‌ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮಲಬಾರ್‌ ಗ್ರೂಪ್‌ನ ಅಧ್ಯಕ್ಷ ಎಂ.‍‍ಪಿ.ಅಹ್ಮದ್‌ ‘ಗ್ರಾಹಕರ ತೃಪ್ತಿ ನಮ್ಮ ಯಶಸ್ಸಿನ ಮೂಲಾಧರ ಎಂದು ಪರಿಗಣಿಸಿದ್ದೇವೆ. ಬೀದರ್‌ನ ಈ ಮಳಿಗೆಯ ವ್ಯಾಪಕ ಸಂಗ್ರಹಗಳು ಗ್ರಾಹಕರಿಗೆ ಉತ್ತಮವಾದುದನ್ನು ಒದಗಿಸಲಿದೆ. ಇಲ್ಲಿ ಚಿನ್ನ, ವಜ್ರ, ಪೋಲ್ಕಿ, ರತ್ನದ ಕಲ್ಲುಗಳು, ಬೆಳ್ಳಿ, ಪ್ಲಾಟಿನಂ ಹಾಗೂ ಇನ್ನೂ ಹೆಚ್ಚಿನ ಸಂಗ್ರಹಗಳು ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಇವೆ’ ಎಂದು ತಿಳಿಸಿದರು.

‌ಈ ಮಳಿಗೆಯಲ್ಲಿ ಉದ್ಘಾಟನಾ ಕೊಡುಗೆಯಾಗಿ ಫೆ.11ರವರೆಗೆ ಪ್ರತಿ ಖರೀದಿಯ ಮೇಲೆ ಬೆಳ್ಳಿಯ ನಾಣ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೇ ವೆಡ್ಡಿಂಗ್‌ ಅಡ್ವಾನ್ಸ್‌ ಯೋಜನೆಯು ಲಭ್ಯವಿದ್ದು,  ಗ್ರಾಹಕರು ಮುಂಗಡವಾಗಿ ಶೇ 10ರಷ್ಟು ಹಣವನ್ನು ಪಾವತಿಸಿ ಬುಕ್‌ ಮಾಡಿಕೊಳ್ಳಬಹುದು. ಖರೀದಿ ಸಮಯದಲ್ಲಿ ಬುಕ್‌ ಮಾಡಿದ ದರ ಅಥವಾ ಚಾಲ್ತಿಯಲ್ಲಿರುವ ದರ, ಈ ಪೈಕಿ ಯಾವುದು ಕಡಿಮೆ ಇರುತ್ತದೆಯೋ ಆ ಬೆಲೆಯಲ್ಲಿ ಆಭರಣವನ್ನು ಖರೀದಿಸಬಹುದಾಗಿದೆ ಎಂದು ಅವರು ತಿಳಿಸಿದರು.

ನವೀಕೃತ ಮಳಿಗೆ ಉದ್ಘಾಟನೆ ವೇಳೆ ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ನ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಫಿಲ್ಸೋರ್‌ ಬಾಬು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT